ಕುಂದಾಪುರ (ಮಾ.14) : ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸ್ಥಾಪಕ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಶಿಕ್ಷಕ ಪ್ರದೀಪ್ ಶೆಟ್ಟಿ ಕಾವ್ರಾಡಿ, ಚೇತನ್ ಶೆಟ್ಟಿ ಕೋವಾಡಿ, ಅಕ್ಷಯ್ ಶೆಟ್ಟಿ ಮುಂಬಾರು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಜೋರಮಕ್ಕಿ, ಸಂದೇಶ್ ಶೆಟ್ಟಿ ಮುಂಬಾರು, ಸಚಿನ್ ಶೆಟ್ಟಿ ವಕ್ವಾಡಿ, ಮಹೇಂದ್ರ ಶೆಟ್ಟಿ ಹಾಗೂ ಈ ಸಂದರ್ಭದಲ್ಲಿ ಸಾಧಕ ಸಿ.ಎ ಸಂಪತ್ ಶೆಟ್ಟಿಯವರ ತಂದೆ ಶೇಖರ ಶೆಟ್ಟಿ, ತಾಯಿ ಪ್ರೇಮಲತಾ ಶೆಟ್ಟಿ, ಅಜ್ಜಿ ಬಚ್ಚಮ್ಮ ಶೆಟ್ಟಿ ಉಪಸ್ಥಿತರಿದ್ದರು.