ಕುಂದಾಪುರ (ಮಾ. 15) ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಇದೇ ತಿಂಗಳ 26 ಹಾಗೂ 27ನೇ ದಿನಾಂಕದಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 750 ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ಉದ್ಯೋಗ ಮೇಳದ ಕುರಿತು ಆಯೋಜಿಸಿದ ಪತ್ರಿಕಾ ಪ್ರಕಟಣೆಯ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿ ಸೋಜಾ, ಹಾಗೂ ಡೀನ್ ಪ್ಲೇಸ್ಮೆಂಟ್ ಪ್ರೊ. ಸತ್ಯನಾರಾಯಣ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ. ಪ್ರದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳಕ್ಕೆ ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎ, ಎಮ್.ಸಿ.ಎ, ಬಿ.ಬಿ.ಎ, ಎಮ್.ಎಸ್ಸಿ, ಎಮ್.ಕಾಂ ಹಾಗೂ ಎಮ್.ಬಿ.ಎ, ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುತ್ತಾರೆ. ಈ ಉದ್ಯೋಗ ಮೇಳದಲ್ಲಿ 2020 ಮತ್ತು ಅದಕ್ಕಿಂತ ಹಿಂದೆ ಪದವಿ ಮುಗಿಸಿದ ಅಭ್ಯರ್ಥಿಗಳೂ ಕೂಡ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು www.mitkundapura.com/jobfair ವೆಬ್ ಪೇಜ್ ನಲ್ಲಿ ಲಭ್ಯವಿರುವ ಲಿಂಕ್ ನ ಉಪಯೋಗಿಸಿ ನೋಂದಣಿ ಮಾಡಿಕೊಳ್ಳಬಹುದು. ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ.
ಈ ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಯ ಜೆರಾಕ್ಸ್, ಆಧಾರಕಾರ್ಡ್, 5 ಪಾಸ್ಪೋರ್ಟ ಸೈಜ್ ಪೋಟೋಗಳು ಹಾಗೂ ಸ್ವವಿವರದ ಬಯೋಡೆಟಾ ಪ್ರತಿಗಳನ್ನು ತರಬೇಕೆಂದು ಸೂಚನೆ ನೀಡಲಾಗಿದೆ. ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 22/03/2021 ಆಗಿರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 7348845851 ಗೆ ಕರೆ ಮಾಡಿ, ಕಾಲೇಜಿನ ಪ್ಲೇಸ್ಮೆಂಟ್ ಡೀನ್ ಪ್ರೊ.ಸತ್ಯನಾರಾಯಣ ಇವರಿಂದ ಪಡೆಯಬಹುದು.