- ತಕ್ಷಣವೇ ಸಾಲ ಕೊಡುತ್ತೇವೆ ಎಂದು ನಂಬಿಸುವ ಅನುಮಾನಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಇದರಿಂದ ಮೋಸ ಹೋದವರು ಹೆಚ್ಚು, ನೆನಪಿರಲಿ.
- ಈ ಆ್ಯಪ್ ಗಳಿಗೆ ನೀವು ಏನು ಅನುಮತಿಯನ್ನು ನೀಡುತ್ತಿದ್ದೀರಿ ಎಂಬುದರ ಮೇಲೆ ಒಂದು ಕಣ್ಣಿಡಿ. ದಯವಿಟ್ಟು ನಿಮ್ಮ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
- ಈ ಲೋನ್ ಆ್ಯಪ್ಗಳು ಆರ್ .ಬಿ.ಐ. (Reserve Bank of India ) ಅಡಿಯಲ್ಲಿ ಬರುವುದಿಲ್ಲ ಹಾಗೂ ಸಾಲ ತೀರಿಸದೇ ಹೋದರೆ ಇವರು ನಿಮ್ಮನ್ನು ಹಿಂಸಿಸಬಹುದು, ಬೆದರಿಸಬಹುದು ಹಾಗೂ ಸೈಬರ್ ಕಿರುಕುಳ ನೀಡಬಹುದು. ಜೊತೆಗೆ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಬೇರೆಯವರಿಗೆ ಕೊಡಬಹುದು, ಎಚ್ಚರಿಕೆಯಿಂದಿರಿ. ಇದು ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಲಿದೆ.
- ಈ ಆ್ಯಪ್ ಗಳಿಗೆ ಆರ್.ಬಿ.ಐ ಮಾನ್ಯತೆ ಸಿಕ್ಕಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.
- ಸೈಬರ್ ಜಾಗೃತಿ ಪಡೆದುಕೊಳ್ಳಿ ಹಾಗೂ ಎಚ್ಚರ ವಹಿಸಿ.
- ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ ಎ.ಟಿ.ಎಂ. ರಹಸ್ಯ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ.