ಗಂಗೊಳ್ಳಿ (ಮಾ.18) ಕರ್ನಾಟಕ ಸರಕಾರ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಕೊಂಕಣಿ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು, ಎಸ್.ಎಮ್.ಎಸ್. ಕಲಾವೈಭವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯಚಿತ್ರಗಾರ, ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ, ಪ್ರದರ್ಶನಕಾರ ಮತ್ತು ಛಾಯಾ ಚಿತ್ರಗ್ರಾಹಕ ಗಂಗೊಳ್ಳಿ ಶ್ರೀ ಭಾಸ್ಕರ ಕಲೈಕಾರ್ ರವರು ಮುಂದಿನ ಯುವ ಪೀಳಿಗೆಗಾಗಿ ನಿರ್ಮಿಸಿರುವ ಮ್ಯೂಸಿಯಂ ಉದ್ಘಾಟನೆ ಇದೇ ಮಾರ್ಚ್ 21ರ ಬೆಳಿಗ್ಗೆ 10-30 ಗಂಟೆಗೆ ಗಂಗೊಳ್ಳಿಯ. ‘ಶ್ರೀ ದೇವಿಪ್ರಸಾದ್’ ಕಲೈಕಾರ್ ಮಠದ ಬಳಿ ನಡೆಯಲಿದೆ.
ಈ ಮ್ಯೂಸಿಯಂನ್ನು ಹಂಗಾರಕಟ್ಟೆ ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ.ಶ್ರೀ.ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಶ್ರೀ ಕೆ. ಶಿವಾನಂದ ಕಾರಂತ್ ಗುಜ್ಜಾಡಿ, ಶ್ರೀ ದೇವರಾಯ ಮಂಜುನಾಥ ಶೇರೆಗಾರ್ ಮುಂಬೈ ,ಶ್ರೀ ಎಂ. ರಾಮಕೃಷ್ಣ ಪೈ ಗಂಗೊಳ್ಳಿ, ಡಾ| ಎಚ್. ರಾಮ್ ಮೋಹನ್ ಕುಂದಾಪುರ ,ಶ್ರೀ ಬಿ. ರಾಘವೇಂದ್ರ ಪೈ ಗಂಗೊಳ್ಳಿ, ಶ್ರೀ ಪಿ. ಜಯವಂತ ಪೈ ಕುಂದಾಪುರ, ಶ್ರೀ ಯು. ಎಸ್. ಶೆಣೈ ಗಂಗೊಳ್ಳಿ, ಶ್ರೀ ವಸಂತ ಎಚ್. ಕರ್ಕಿಕರ್ ಹೊನ್ನಾವರ, ಶ್ರೀ ಘನಶ್ಯಾಮ ಟಿ. ಮೇಸ್ತ, ಮುಂಬೈ ಹಾಗೂ ಡಾ| ಬಾಲಚಂದ್ರ ಮೇಸ್ತ, ಹೊನ್ನಾವರ ರವರು ಉಪಸ್ಥಿತರಿರಲಿದ್ದಾರೆ.
ಹಲವು ವರ್ಷಗಳಿಂದ ಶ್ರೀ ಭಾಸ್ಕರ್ ಕಲೈಕರ್ ಗಂಗೊಳ್ಳಿ ಯವರು ಅಪರೂಪದ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿ ರಾಜ್ಯದ ವಿವಿಧ ಭಾಗದಲ್ಲಿ ಪ್ರದರ್ಶನವನ್ನು ಏರ್ಪಡಿಸಿದ್ದು ಇದೀಗ ತಮ್ಮ ಊರಿನಲ್ಲಿ ಮ್ಯೂಸಿಯಮ್ ನ್ನು ಸ್ಥಾಪಿಸುತ್ತಿರುವುದು ಶ್ಲಾಘನೀಯ.