ಉಡುಪಿ (ಮಾ. 23) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪರಿಸರ ಕ್ಲಬ್ ಮತ್ತು ಸಂಸ್ಥೆಯ ಸಿವಿಲ್ ವಿಭಾಗದ ಸ್ಥಪತಿ ಘಟಕದ ಸಹಯೋಗದೊಂದಿಗೆ ವಿಶ್ವ ಜಲದಿನಾಚರಣೆಯ ಅಂಗವಾಗಿ 22 ಮಾರ್ಚ್ 2021 ರಂದು “ಮಾನವನ ಆಧುನಿಕ ಚಟುವಟಿಕೆಗಳು ನೀರಿನ ಕೊರತಗೆ ಕಾರಣವಾಗಿವೆಯೇ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ಜಿಲ್ಲಾ ಜಲಸಂಪನ್ಮೂಲ ವ್ಯಕ್ತಿ ಶ್ರೀ ಜೋಸೆಫ್ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಗತ್ತು ಎದುರಿಸುತ್ತಿರುವ ಪ್ರಸ್ತುತ ನೀರಿನ ಸಮಸ್ಯೆಗಳು ಮತ್ತು ಹಲವಾರು ದೇಶಗಳು ನೀರಿನ ಸಂರಕ್ಷಣೆಗಾಗಿ ಅನುಸರಸುತ್ತಿರುವ ವಿವಿಧ ವಿಧಾನಗಳ ಬಗ್ಗೆ ಮಾತನಾಡಿದರು. ಬರಪೀಡಿತ ಪ್ರದೇಶಗಳಲ್ಲಿ ನೀರನ್ನು ಸಂರಕ್ಷಿಸಲು ಇಡೀ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಭಾರತದ ಕೆಲವು ಹಳ್ಳಿಗಳ ಬಗ್ಗೆ ಉದಾಹರಣೆ ನೀಡಿದರು. ಜಲಸಂಪನ್ಮೂಲದ ಕೊರತೆಗೆ ಕಾರಣವಾಗುವ ಮಾನವನ ಚಟುವಟಿಕೆಗಳ ಬಗ್ಗೆ ಅವರು ತಿಳಿಸಿದರು.
ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅವರು ವಿಶ್ವ ಜಲದಿನಾಚರಣೆಯ ಮಹತ್ವ ಮತ್ತು ನೀರಿನ ಸಂರಕ್ಷಣೆಯ ಅನಿವಾರ್ಯತೆ – ಅದರ ಸದ್ಬಳಕೆಯಲ್ಲಿ ನಮ್ಮ ಪಾತ್ರದ ಬಗ್ಗೆ ವಿವರಿಸಿದರು. ಕಾಲೇಜಿನ ಪರಿಸರ ಘಟಕದ ಸಂಯೋಜಕಿಯಾದ ಶ್ರೀಮತಿ ರವಿಪ್ರಭ ಕೆ., ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಿವಿಲ್ ವಿಭಾಗದ ವಿದ್ಯಾರ್ಥಿನಿ ಚೈತ್ರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.