ಕುಂದಾಪುರ (ಮಾ. 28) : ಕುಂದಾಪುರ ತಾಲೂಕಿನ ಬೀಜಾಡಿಯ ಶ್ರೀ ನಂದಿಕೇಶ್ವರ ಫ್ರೆಂಡ್ಸ್ ರಿ. ಬೀಜಾಡಿ ಇವರು ಆಯೋಜಿಸಿದ ಶ್ರೀ ನಂದಿಕೇಶ್ವರ ದೇವರ 31 ನೇ ವಾರ್ಷಿಕೋತ್ಸವ ಹಾಗೂ 7ನೇ ವರ್ಷದ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ವೀರ ಯೋಧ ಅನುಪ್ ಪೂಜಾರಿಯನ್ನು ಸನ್ಮಾನಿಸಲಾಯಿತು.
ಗೌರವ ಸನ್ಮಾನ ಸ್ವೀಕರಿಸಿ ಮಾತುಗಳನ್ನಾಡಿದ ಯೋಧ ಅನುಪ್ ಪೂಜಾರಿ ಹೆತ್ತವರು ಮಕ್ಕಳ ಸಾಹಸ ಶೌರ್ಯಗಳನ್ನು ಪ್ರೋತ್ಸಾಹಿಸುತ್ತಾ ದೇಶ ಭಕ್ತಿ ಹಾಗೂ ದೇಶದ ರಕ್ಷಣೆಯ ಕಡೆಗೆ ಗಮನ ಹರಿಸುವಂತೆ ಹುರಿದುಂಬಿಸಬೇಕು ಎಂದರು.
ಪ್ರತಿ ಮನೆಯಲ್ಲೂ ಒಂದು ಮಗುವನ್ನು ದೇಶ ಸೇವೆಗಾಗಿ ಸಜ್ಜುಗೊಳಿಸ ಬೇಕು.ಇದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪೂರಕ ಮತ್ತು ಸಂವಿಧಾನದ ಆಶಯಗಳನ್ನು ಪ್ರೋತ್ಸಾಹಿಸಿದಂತೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಡಳಿತ ಮೋಕ್ತೇಸರರಾದ ಆನಂದ ಬಿಳಿಯಾರ್, ಬಾಬಣ್ಣ ಪೂಜಾರಿ, ಶ್ರೀನಿವಾಸ ಕುಂದರ್, ಗಣಪತಿ ಟಿ ಶ್ರೀಯಾನ್, ಪತ್ರಕರ್ತ ಎಸ್ ಸತೀಶ್ ಕುಮಾರ್, ಸಂಘದ ಅಧ್ಯಕ್ಷರಾದ ಬಸವ ಬೀಜಾಡಿ, ಪುಂಡಲೀಕ ಬಂಗೇರ, ಮಂಜುನಾಥ ಕುಂದರ್, ಸತ್ಯ ತಿಂಗಳಾಯ, ರವಿ ಉಪಸ್ಥಿತರಿದ್ದರು. ಸುಭಾಸ್ ವಂದಿಸಿದರು. ಸುರೇಂದ್ರ ಸಂಗಮ್ ಕಾರ್ಯಕ್ರಮ ನಿರೂಪಿದರು.