ಕುಂದಾಪುರ (ಮಾ. 30) : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಿತು.
ಕುಂದಾಪುರ ಎಜುಕೇಶನ್ ಸೊಸೈಟಿ(ರಿ) ಕುಂದಾಪುರ ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂದಾಪುರದ ಪ್ರತಿಷ್ಠಿತ ಚಕ್ರವರ್ತಿ ಸ್ಫೋರ್ಟ್ಸ್ ಕ್ಲಬ್ ನ ಶ್ರೀ ಮನೋಜ್ ನಾಯರ್ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸುದೀಪ್ ಶೆಟ್ಟಿ ಆಜ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ .ಎನ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಕ್ಷಿತ್ ರಾವ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕ ಶಿವರಾಜ್ ಸಿ .ನಾವುಂದ ವಿಜೇತರ ಪಟ್ಟಿಯನ್ನು ವಾಚಿಸಿದರು.
ಮಂಗಳೂರು ವಿವಿ ವ್ಯಾಪ್ತಿಯ 18 ಕಾಲೇಜುಗಳ ಕ್ರಿಕೆಟ್ ತಂಡಗಳು ಪಂದ್ಯಾಕೂಟ ಭಾಗವಹಿಸಿದ್ದು ಎಸ್.ಡಿ.ಎಮ್. ಕಾಲೇಜು ಉಜಿರೆ ಚಾಂಪಿಯನ್ನಾಗಿ ಹಾಗೂ ಬ್ರಹ್ಮಾವರದ ಎಸ್.ಎಮ್.ಎಸ್ .ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿತು. ಮಂಗಳೂರು ವಿ.ವಿ. ಕ್ಯಾಂಪಸ್ ನ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಸಂದೀಪ್ ಸರಣಿ ಶ್ರೇಷ್ಠ ಆಟಗಾರರಾಗಿ, ಎಸ್.ಡಿ.ಎಮ್ .ಕಾಲೇಜಿನ ನವೀನ್ ಜೈನ್ ಉತ್ತಮ ದಾಂಡಿಗ ಹಾಗೂ ಎಸ್ .ಎಮ್. ಎಸ್. ಕಾಲೇಜಿನ ಹರೀಶ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು.