ಮಧುವನ (ಏ, 7): ಇಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಧು ಟಿ. ಭಾಸ್ಕರನ್ ರವರು ಕಾರ್ಯಕ್ರಮವನ್ನು
ಉದ್ಘಾಟಿಸುವುದರ ಜೊತೆಗೆ ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿದರು. ಇಂದಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಒಬ್ಬರ ಸಮಸ್ಯೆಯಾಗಿರದೆ ವಿಶ್ವದ ಸಮಸ್ಯೆಯಾಗಿದೆ ಆದ್ದರಿಂದ ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರು ಪ್ರಾಂಶುಪಾಲರಾದ ಪ್ರೊ. ನಟರಾಜ್ ಕೆ, ಮಾತನಾಡಿ ಆರೋಗ್ಯದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ “ಆರೋಗ್ಯವಂತ ವಿಶ್ವದ ನಿರ್ಮಾಣ” ಎಂಬ ವಿಷಯದ ಕುರಿತು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಹಾಗೂ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕ್ರಮವಾಗಿ ಕುಮಾರಿ ಮೇಘನಾ ಎಸ್ ಕುಮಾರ್ ದ್ವಿತೀಯ ಬಿ.ಎಸ್ಸಿ ನರ್ಸಿಂಗ್ ಪ್ರಥಮ, ಕುಮಾರಿ ಅನಿತಾ ಹಾಗೂ ಕುಮಾರಿ ಶಿಲ್ಪಶ್ರೀ ತೃತೀಯ ಬಿಎಸ್ಸಿ ನರ್ಸಿಂಗ್ ದ್ವಿತೀಯ ಮತ್ತು ಕುಮಾರಿ ಜಸೀನ್ ಪೀಟರ್ ಪ್ರಥಮ ಬಿಎಸ್ಸಿ ನಸಿಂಗ್ ತೃತೀಯ ಬಹುಮಾನವನ್ನು ಪಡೆದರು.
ಜೋಜಿನ್ ಜೋಸೆಫ್ ಆಡಳಿತಾಧಿಕಾರಿಗಳು ಇ ಸಿ ಆರ್ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್, ಆಕಾಶ್ ಸಾವಳಸಂಗ್ ಪ್ರಾಂಶುಪಾಲರು, ಇ.ಸಿ.ಆರ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಪ್ರೊ. ತಾಜದಾರ್ ಹುಸೇನ್ ಪ್ರಾಂಶುಪಾಲರು ಎವಿಯೇಷನ್ ಕಾಲೇಜ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.