ಬೆಳಗಾವಿ (ಏ, 7): ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸಂಶೋಧನೆ ಮಹಾವಿದ್ಯಾಲಯದ ಗಣಕಯಂತ್ರ-ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಮಹಾಂತೇಶ ಏಳಮ್ಮಿ ರವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.
ಬಾಗಲಕೋಟೆ ಜಿಲ್ಲೆಯ ನಿವಾಸಿಯಾದ ಡಾ.ಮಹಾಂತೇಶ ಏಳಮ್ಮಿ ಯವರು ಡಾ. ಬಸವರಾಜ್ ಅನಾಮಿ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “CHARACTERIZATION AND CLASSIFICATION OF COMMON FABRIC MATERIALS AND THEIR DEFECTS” ಎನ್ನುವ ವಿಷಯಕ್ಕೆ ಪಿ.ಎಚ್.ಡಿ ಪದವಿ ಲಭಿಸಿರುತ್ತದೆ.
ಇವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ವಿ. ಗೋರಬಾಳ, ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, JGI ಸಮೂಹ ಸಂಸ್ಥೆ ಹಾಗೂ ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.