ಕುಂದಾಪುರ (ಏ, 8): ಮಂಗಳೂರು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 2020ರಲ್ಲಿ ನಡೆಸಿದ ಅಂತಿಮ ಬಿ.ಕಾಂ ಪರೀಕ್ಷೆಯಲ್ಲಿ ಐದನೇ ಹಾಗೂ ಆರನೇ ಸೆಮಿಸ್ಟರ್ಗಳ ‘ಪೈನಾನ್ಶಿಯಲ್ ಎಕೌಂಟಿಗ್’ ವಿಷಯದಲ್ಲಿ ಕಾಲೇಜಿನ ದೀಪಾ ದೇವಾಡಿಗ ಮತ್ತು ಜ್ಯೋತಿ ಇವರು 300 ರಲ್ಲಿ 300 ಅಂಕ ಗಳಿಸಿ ICAI ನೀಡುವ ಚಿನ್ನದ ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಇವರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ , ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ , ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಶುಭಹಾರೈಸಿ ಅಭಿನಂದಿಸಿರುತ್ತಾರೆ.