ಕೋಟ (ಏ, 12): ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಅಯೋಜನೆಗೊಂಡ ಸರಣಿ ಕಾರ್ಯಕ್ರಮಗಳ ಮೊದಲ ದಿನದ ‘”ಸ್ಪೂರ್ತಿ” ಕಾರ್ಯಕ್ರಮದಲ್ಲಿ ಮಣೂರು ಕಡಲತೀರ ಹಾಗೂ ಸ್ಮಶಾನದ ಬಳಿ ಹಮ್ಮಿಕೊಂಡ ಸ್ವಚ್ಚತಾ ಅಭಿಯಾನದಲ್ಲಿ ಗೀತಾನಂದ ಫೌಂಡೇಶನ್ ಹಾಗೂ ಜನತಾ ಸಮೂಹ ಸಂಸ್ಥೆಗಳು ಇದರ ಪ್ರವರ್ತಕರಾದ ಆನಂದ್. ಸಿ. ಕುಂದರ್ ಭಾವಹಿಸಿದ್ದರು.
ಕೋಟ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಕ್ಲೀನ ಕುಂದಾಪುರ ಪ್ರೋಜೆಕ್ಟ್ ತಂಡದ ಸದಸ್ಯರು, ಪಂಚವರ್ಣ ಯುವಕ ಮಂಡಲದ ಸದಸ್ಯರು, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇದರ ಎಲ್ಲಾ ಪಧಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಒಟ್ಟು 58 ಚೀಲ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ 13ಚೀಲ ಬಾಟಲಿಗಳನ್ನು ಸಂಗ್ರಹಿಸಿ ಕಸ ವಿಲೇವಾರಿ ಘಟಕಕ್ಕೆ ನೀಡಿದರು.