ಮಂಗಳೂರು (ಏ, 13) : ಮಂಗಳೂರು ವಿಶ್ವವಿದ್ಯಾನಿಲಯ 2019-20 ರಲ್ಲಿ ನಡೆಸಿದ ಎಮ್.ಬಿ.ಎ. ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಎಸ್.ಡಿ.ಎಮ್. ಉದ್ಯಮಾಡಳಿತ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ.
ಇವರು ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮದ ನಿವಾಸಿ ಶ್ರೀಮತಿ ಮುಕಾಂಬು ಮತ್ತು ಪ್ರಭಾಕರ ಶೆಟ್ಟಿಯವರ ಪುತ್ರ.