ಆ ದಿನ ರಾತ್ರಿ ಸಮಯ 10 ಗಂಟೆ…
ಊಟ ಮಾಡಿ ಮನೆಯವರೆಲ್ಲರೂ ನಿದ್ದೆಗೆ ಜಾರುತ್ತಿದ್ದ ಸಮಯ…
ನಿದ್ದೆಗೆ ಜಾರಿದ ಸ್ವಲ್ಪ ಹೊತ್ತಿನಲ್ಲಿ ದೇಹದ ಉಸಿರಾಟದಲ್ಲಿ ಏರಿಳಿತವಾದ ಅನುಭವವಾಯಿತು.. ಸ್ವಲ್ಪ ಹೊತ್ತು ಎದ್ದು ಕೂತು ಮತ್ತೆ ಮಲಗಿದೆ.ಆದರೂ ಉಸಿರಾಟ ಅಸಹಜವಾಗಿತ್ತು. ಇನ್ನೆನೂ ಉಸಿರೆ ನಿಂತಂತೆ ಭಾಸವಾಯಿತು..
ಅಯ್ಯೋ ದೇವರೆ .. ಇದೆಂತ ದುರ್ವಿಧಿ..

ನನಗೆನಾದರೂ ಕರೋನಾ ಸೋಂಕು ತಗುಲಿತೆ ಎಂದು ಭ್ರಮಿತನಾದೆ.ನನ್ನಿಂದಾಗಿ ಮನೆ ಮಂದಿಯೆಲ್ಲಾ ಸಂಕಷ್ಟಕ್ಕೆ ಸಿಲುಕಿದರೆಂಬ ಭಯ ಕಾಡತೊಡಗಿತು. ಭವಿತವ್ಯದ ಕನಸುಗಳು ಕಮರಿದಂತಾಯಿತು. ಮನದ ಆಕಾಂಕ್ಷೆಗಳು ಮರುಗಿಹೊದಂತಾಯಿತು. ಹಲವು ದಿನಗಳಿಂದ ನನ್ನ ಜೊತೆಗಿದ್ದ ಮಿತ್ರರಿಗೂ ಕರೆ ಮಾಡಿ ಅವರಿಗೂ ಈ ರೀತಿಯ ಅನುಭವ ವಾಯಿತೆ ಎಂದು ವಿಚಾರಿಸಲು ಮೊಬೈಲ್ ಕೈಗೆತ್ತಿಕೊಳ್ಳಲು ಮುಂದಾದೆ.
ಅಷ್ಟರಲ್ಲೆ ಮನೆ ಮಂದಿಯೆಲ್ಲಾ ನಿದ್ದೆಗೆ ಜಾರಿದ್ದನ್ನು ನೋಡಿ ಸುಮ್ಮನಾದೆ. ಭ್ರಾಂತ ಕಿವಿಗಳಿಗೆ ಅಂಬ್ಯುಲೆನ್ಸ್ ನ ಗುಂಯಿ ಗುಂಯಿ ಸದ್ದು ಕೇಳಿಸಿದಂತಾಯಿತು. ವೇಂಟಿಲೆಟರ್ ಕಣ್ಣ ಮುಂದೆ ಹರಿದಾಡಿದಂತಾಯಿತು.. ವೈದ್ಯರು & ದಾದಿಯರು ವಿಭಿನ್ನ ಉಡುಗೆ ತೊಟ್ಟು ಆಚೆ ಇಚೆ ಒಡಿಬಂದಂತಾಯಿತು. ಇಟಲಿ,ಸ್ಪೇನ್, ಅಮೇರಿಕಾದಲ್ಲಿ ಕರೋನಾ ಪಿಡಿತರ ಸ್ಥಿತಿಗತಿ ಟಿ.ವಿ ಮಾಧ್ಯಮದಲ್ಲಿ ಕಂಡಂತಹ ಕಣ್ಣುಗಳು ಕುಗ್ಗಲಾರಂಬಿಸಿದವು. ಅಸಹಾಯಕನಾಗಿ ಉಸಿರಾಟದ ಏರಿಳಿತ ನೋಡಲು ಎದೆ ಹಿಡಿದುಕೊಂಡೆ ! ಯಾಕೆ ನನ್ನ ದೇಹದೊಳಗೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲಾರಂಭಿದಿದೆ.
ಅಮ್ಮಾ ಎಂದು ಕುಗಲೆತ್ನಿಸಿದೆ .. ಅದಾಗಲೆ ನನ್ನ ಚಡಪಡಿಕೆಯನ್ನು ಗಮನಿಸಿದ ಅಮ್ಮ ತಟ್ಟನೆ ಎದ್ದು ಏನಾಯಿತು ನಿನಗೆ ಎಂದು ಕೇಳಿದರು. ಎನಗಿಲ್ಲಾ ,ರಾತ್ರಿ ಊಟದ ಜೊತೆ ಮೆಣಸಿನಕಾಯಿ ಬೊಂಡಾ ಮಾಡಿದೆಯಲ್ಲಾ ,ಸ್ವಲ್ಪ ಗ್ಯಾಸ್ಟ್ರಿಕ್ ಆಗಿ ಎದೆ ಹಿಡಿದುಕೊಂಡಿದೆ ಎಂದೆ.ಕೂಡಲೆ ಅಮ್ಮಾ ಬಿಸಿ ನೀರಿಗೆ ಸ್ವಲ್ಪ ಜಿರಿಗೆ ಹಾಕಿ ಕೊಟ್ಟರು.. ಜೀರಿಗೆ ನೀರು ಕುಡಿದ ಸ್ವಲ್ಪ ಹೊತ್ತಿನಲ್ಲೆ ಉಸಿರಾಟ ಸಹಜ ಸ್ಥಿತಿಗೆ ಬಂತು.
ಕರೋನಾ ಕಣ್ಣಂಚಿನಲ್ಲೆ ಮಾಯವಾಯಿತು. ನಿದ್ದೆ ಕೈ ಬೀಸಿ ಕರೆಯಿತು..
Be cool .. ಮಾಸ್ಕ್ ಧರಿಸಿ ….. ದೈಹಿಕ ಅಂತರ ಕಾಯ್ದುಕೊಳ್ಳಿ ….. ಕರೋನಾ ಎರಡನೇ ಅಲೆಯಿಂದ ರಕ್ಷಿಸಿಕೊಳ್ಳಿ ..
✍️ ಪ್ರವೀಣ್ ಗಂಗೊಳ್ಳಿ











ತುಂಬಾ ಚೆನ್ನಾಗಿದೆ ಸರ್👌👌