ಬೈಂದೂರು ( ಏ, 20) : ಕೋವಿಡ್-19 ಮಾರ್ಗಸೂಚಿಯಲ್ಲಿ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಿರುವುದರಿಂದ ಎಪ್ರಿಲ್ 22ರಿಂದ 29 ರ ತನಕ ನಡೆಯಬೇಕಿದ್ದ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ನಾಕಟ್ಟೆ ಯಡ್ತೆರೆ ಇದರ ನವೀಕೃತ ಗರ್ಭಗೃಹ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ, ಗೆಂಡ ಸೇವೆ- ಪಂಜುರ್ಲಿ ನೇಮೋತ್ಸವ, ಶ್ರೀ ಬ್ರಹ್ಮಬೈದರ್ಕಳ ಜಾತ್ರಾಮಹೋತ್ಸವ, ಧಾರ್ಮಿಕ – ಸಾಂಸ್ಕೃತಿಕ ವೈಭವೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕೋವಿಡ್ ನಿಯಮಗಳು ಸಡಿಲಗೊಂಡ ಬಳಿಕ ಕಾರ್ಯಕ್ರಮಗಳ ದಿನಾಂಕವನ್ನು ತಿಳಿಸಲಾಗುವುದು ಎಂದು
ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ನಾಕಟ್ಟೆ ಇದರ ಆಡಳಿತ ಮಂಡಳಿ ತಿಳಿಸಿದೆ.