ಮಂಗಳೂರು (ಎ. 21): ಮಂಗಳೂರು ವಿ. ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೆಶಕರಾದ ಡಾ. ಕಿಶೋರ್ ಕುಮಾರ್ ಸಿ. ಕೆ. ರವರನ್ನು ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಹೇಶ್ ಆರ್. ಹೊರಡಿಸಿದ ಆದೇಶದ ಮೇರೆಗೆ ಮಂಗಳೂರು ವಿ. ವಿ. ಯ ಅವರು ನೂತನ ಕುಲಸಚಿವರಾಗಿ (ಆಡಳಿತ) ನೇಮಕ ಮಾಡಲಾಗಿದೆ.
ಪ್ರಭಾರ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೋ. ಪಿ. ಎಲ್. ಧರ್ಮ ರವರು ನೂತನ ಕುಲಸಚಿವ ಕಿಶೋರ್ ಸಿ. ಕೆ. ಅವರಿಗೆ ಏಪ್ರಿಲ್ 21 ರಂದು ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.










