ಕುಂದಾಪುರ (ಏ, 26) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೆ ಓವರ್ ನಲ್ಲಿ ಎಲ್ಲಾ ವಿಧದ ವಾಹನಗಳು ಓಡಾಟ ಪ್ರಾರಂಭಿಸಿದೆ. ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ. ಏಕೆಂದರೆ ಒಮ್ಮೆ ನೀವು ಫ್ಲೆ ಓವರ್ ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಅಥವಾ ಸಂಗಮ ಬಳಿ.
ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರುನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ ಸರ್ವಿಸ್ ರಸ್ತೆಯನ್ನೇ ಹಿಡಿಯಬೇಕಾಗುತ್ತದೆ. ಹಾಗೆಯೇ ಬೈಂದೂರು ಕಡೆಯಿಂದ ಬರುವವರು ಕುಂದಾಪುರ ಸಿಟಿ ಪ್ರವೇಶಿಸ ಬೇಕಾದರೆ ಸಂತೆ ಮಾರುಕಟ್ಟೆಯ ಬಳಿ ಇರುವ ಸರ್ವಿಸ್ ರಸ್ತೆ ಹಿಡಿಯುವುದು ಉತ್ತಮ. ಇಲ್ಲದಿದ್ದರೆ ಹಂಗಳೂರಿನ ಬಳಿ ಇರುವ ಸರ್ವಿಸ್ ರಸ್ತೆ ಮೂಲಕ ಕುಂದಾಪುರ ಸಿಟಿಯನ್ನು ಪ್ರವೇಶಿಸಬೇಕಾಗುತ್ತದೆ. ಅಪ್ಪಿತಪ್ಪಿ ಫ್ಲೈ ಓವರ್ ಏರಿದರೆ ನೀವು ಸಮಯ & ಸಂಯಮ ಎರಡನ್ನು ಕಳೆದುಕೊಳ್ಳುವಿರಿ. ಯಾವುದಕ್ಕೂ ಕುಂದಾಪುರ ಸಿಟಿಯನ್ನು ಪ್ರವೇಶಿಸುವಾಗ ಸ್ವಲ್ಪ ಮುಂಜಾಗ್ರತೆ ವಹಿಸಿ.