ಇಂದೋರ್ (ಏ, 27): ಕೊರೋನಾ ಎರಡನೇ ಅಲೆ ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆ ಹಾಕಿಕೊಂಡ ಎಲ್ಲಾ ಯೋಜನೆ ಹಾಗೂ ಯೋಚನೆಗಳು ತಲೆಕೆಳಗಾಗಿದೆ. ಅದರಲ್ಲೂ ಮದುವೆ ಸಮಾರಂಭ ಆಯೋಜಿಸಿದವರು ಹೇಗಾದರೂ ಮಾಡಿ ಹಮ್ಮಿಕೊಂಡ ಕಾರ್ಯ ಸುಸೂತ್ರವಾಗಿ ನಡೆಸ ಬೇಕೆಂದು ಹರ ಸಾಹಸ ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ.
ವಧು- ವರರಿಬ್ಬರು ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಸಂಗತಿ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ. ವಧುವಿಗೆ ಕೊರೊನಾ ಪರೀಕ್ಷೆಗೆ ನಡೆಸಿದಾಗ ಪಾಸಿಟಿವ್ ಎಂದು ರಿಪೋರ್ಟ ಬಂದಿದ್ದುತ್ತು. ವಧುವಿಗೆ ಸೋಂಕು ಇರುವ ವಿಷಯ ತಿಳಿಯುತ್ತಿದ್ದಂತೆ ಮದುವೆ ನಿಲ್ಲಿಸಲು ಸ್ಥಳೀಯ ಆಡಳಿತವೂ ಮುಂದಾಗಿತ್ತು. ಆದರೆ ಒತ್ತಾಯದ ಮೇರೆಗೆ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ಮದುವೆ ಕಾರ್ಯ ನಡೆಸಲಾಯಿತು. ಸೋಂಕು ಹರಡದಂತೆ ಇಬ್ಬರಿಗೂ ಪಿಪಿಇ ಕಿಟ್ ಧರಿಸಲು ಅಧಿಕಾರಿಗಳು ನಿರ್ದೇಶನ ನೀಡಿ ಶೀಘ್ರವೇ ಮದುವೆ ಕಾರ್ಯ ಮಾಡಿಸಿದ್ದಾರೆ. ಪಿಪಿಇ ಕಿಟ್ ಧರಿಸಿಯೇ ಇಬ್ಬರೂ ಸಪ್ತಪದಿ ತುಳಿದು ಎಲ್ಲರ ಗಮನ ಸೆಳೆದಿದ್ದಾರೆ.










