ಕುಂದಾಪುರ (ಏ, 28): ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಜೆ.ಸಿ.ಐ. ಸಿಟಿ ಕುಂದಾಪುರದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಮತ್ತು ಅವರ ಜೆಸಿಐ ಕುಂದಾಪುರ ಸಿಟಿ ತಂಡ ದಾನಿಗಳ ನೆರವಿನಿಂದ ಅಶಕ್ತರಿಗೆ ಸಹಾಯ ಹಸ್ತ ನೀಡಿದ್ದರು. 40 ದಿನಗಳ ಕಾಲ ಸರಿಸುಮಾರು 9,500 ಮಂದಿಗೆ ಊಟ ಕೊಟ್ಟು ಈ ತಂಡ ಮಾನವೀಯತೆ ಮೆರೆದಿದ್ದರು.
ಹಾಗೆಯೇ ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಏಪ್ರಿಲ್ 27 ರಿಂದ 14 ದಿನಗಳ ಕಾಲ ಸರ್ಕಾರ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಸಹಾಯ ಮಾಡಲು ಹುಸೇನ್ ಹೈಕಾಡಿ ಮತ್ತು ಅವರ ಜೆಸಿಐ ಸಿಟಿ ಕುಂದಾಪುರ ತಂಡ ಮತ್ತೊಮ್ಮೆ ಸಜ್ಜಾಗಿದೆ.
ಎ.28ರಿಂದ ಮತ್ತೆ ತಮ್ಮ ಸೇವಾ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ. ವಲಸೆ ಕಾರ್ಮಿಕರು, ನಿರಾಶ್ರಿತರು, ಬಡವರು, ಲಾರಿ ಚಾಲಕರು ಹೀಗೆ ಸಂಕಷ್ಟದಲ್ಲಿ ಸಿಲುಕಿರುವ ಪ್ರತಿಯೊಬ್ಬರಿಗೂ ತಮ್ಮ ತಂಡದ ಕಡೆಯಿಂದ ಕೈಯಲ್ಲಾದಷ್ಟು ಸಹಾಯ ಮಾಡಲು ತಂಡ ಸಜ್ಜಾಗಿದೆ. ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಾದವರಿಗೆ ಅಗತ್ಯಕ್ಕೆ ಅನುಗುಣವಾಗಿ ಪ್ರತಿನಿತ್ಯ ಊಟ ಕೊಟ್ಟ ಸಹಾಯ ಹಸ್ತ ಚಾಚಲು ಈ ತಂಡ ಸಜ್ಜಾಗಿದೆ.
42 ದಿನಗಳ ಕಾಲ 6,500ಕ್ಕೂ ಹೆಚ್ಚು ಜನತೆಗೆ ಇಗಾಗಲೇ ಈ ತಂಡ ಸಹಾಯ ಮಾಡಿದೆ. ಇದರ ಹಿಂದೆ ದೊಡ್ಡ ಮಟ್ಟದ ಪೂರ್ವ ತಯಾರಿ ಹಾಗೂ ಯೋಜನೆಯ ಅನುಷ್ಠಾನದ ಕುರಿತಾಗಿ ನಿರಂತರ ಶ್ರಮ ವಹಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಈ ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಲೆಬೇಕು. ದಾನಿಗಳ ನೆರವು ಕಿಂಚಿತ್ತೂ ವ್ಯರ್ಥ ಆಗದೆ ಅಶಕ್ತರಿಗೆ ನೆರವು ಸಿಗಬೇಕು ಎನ್ನುವುದೇ ಈ ತಂಡದ ಧ್ಯೇಯ.
ಇದಕ್ಕೆ ಹುಸೈನ್ ಹೈಕಾಡಿಯವರೊಂದಿಗೆ ಇಡೀ ಜೆಸಿಐ ಸಿಟಿ ಕುಂದಾಪುರ ತಂಡವೇ ಶ್ರಮಿಸುತ್ತಿದೆ. ಜೆ.ಸಿ.ಐ. ಸಿಟಿ ಕುಂದಾಪುರದ ನಿಕಟ ಪೂರ್ವ ಅಧ್ಯಕ್ಷ ನಾಗೇಶ್ ನಾವಡ, ಇಗೀನ ಅಧ್ಯಕ್ಷರಾಗಿರುವ ವಿಜಯ ಕುಮಾರ್ ಭಂಡಾರಿ, ರಾಘವೇಂದ್ರ ಚರಣ್ ನಾವಡ , ಜಯಚಂದ್ರ ಶೆಟ್ಟಿ ಹಾಗೂ ಸದಸ್ಯರೆಲ್ಲರೂ ಶ್ರಮಿಸುತ್ತಿದ್ದಾರೆ.
ಈ ಬಾರಿ ದಿನಕ್ಕೆ 150ಕ್ಕೂ ಮಿಕ್ಕಿ ಜನರಿಗೆ ಆಹಾರ ಪೂರೈಕೆ ಮಾಡುವ ಯೋಜನೆ ಈ ತಂಡ ಹಾಕಿಕೊಂಡಿದೆ. 500 ಕ್ಕೂ ಅಧಿಕ ರೇಷನ್ ಕಿಟ್, 2,000 ಮಾಸ್ಕ್, 300 ಗ್ಲೌಸ್ ನೀಡಿ 25 ಯೂನಿಟ್ ರಕ್ತ ದಾನ. ಶಿರೂರಿನಿಂದ ಹೆಬ್ರಿ ತನಕ ಮೆಡಿಸಿನ್ ಪೂರೈಕೆ ಇಗಾಗಲೇ 150 ಕ್ಕೂ ಹೆಚ್ಚಿನ ಜನರಿಗೆ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ Nagesh Navada +91 98867 61747 ಹಾಗೂ Hussain Haikadi +91 94487 24800 ಸಂಪರ್ಕಿಸಲು ಸೂಚಿಸಲಾಗಿದೆ.
ನೊಂದ ಮನಸ್ಸುಗಳಿಗೆ ಸಂಜೀವಿನಿ ನೀಡುವ ಈ ತಂಡದ ಮಾನವೀಯ ನೆಲೆಯ ಕಾರ್ಯಕ್ಕೆ ನಮ್ಮದೊಂದು ಸಲಾಂ
ಟೀಮ್ ಕುಂದವಾಹಿನಿ