ಕೆಲವು ದಿನಗಳಿಂದ ಕರಾವಳಿಯ ಉದ್ದಗಲಕ್ಕೂ ಸೋಷಿಯಲ್ ಮಿಡಿಯಗಳಲ್ಲಿ ಯುವಕನ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ… ಸುದ್ದಿ ವಾಹಿನಿಗಳು ಕೂಡ ಸುದ್ದಿಯಲ್ಲಿ ಹಂಚಿ ಕೊಂಡವು..
ಅಷ್ಟೊಂದು ವೈರಲ್ ಆಯ್ತು ಆ ಒಂದು ಹಾಡಿನ ವಿಡಿಯೋ…
ಯಾವ ಹಾಡು ಇರಬಹುದು?
ಸಿನಿಮಾ ಹಾಡು ಇರಬಹುದು ಅನ್ಕೊಂಡ್ರ !ಹಾಗಂದು ಕೊಂಡ್ರೆ ನಿಮ್ಮ ಊಹೆ ತಪ್ಪು.
ಅದೊಂದು ರಾಮನ ಭಜನೆ. ರಾಮ ಮಂತ್ರವ ಜಪಿಸಿ … ಪಾಪವ ಕಳೆಯೋಣ ಎನ್ನುವ ರಾಮ ನಾಮ ಸ್ಮರಣೆಯ ಆ ಹಾಡನ್ನು ಒಟ್ಟಾರೆ 10 ಲಕ್ಷಕ್ಕು ಅಧಿಕ ಜನ ವೀಕ್ಷಿಸಿದ್ದಾರೆ….
ಮತ್ತು ಯಾರು ಆ ಯುವಕ ?
ಯಾವ ಭಜನೆ ತಂಡ ಅಂತ ಕಾಮೆಂಟ್ ಮೂಲಕ ಪ್ರಶ್ನಿಸುತ್ತಿದ್ದಾರೆ….
ಇಲ್ಲಿದೆ ನೋಡಿ ಎಲ್ಲಾರ ಪ್ರಶ್ನೆಗೆ ಉತ್ತರ..
ಹಾಡಿದ ಯುವಕನ ಹೆಸರು ಮಹೇಶ್ ಕುಂದರ್ ಬೀಜಾಡಿ.
ವೃತ್ತಿಯಲ್ಲಿ ಇಂಜಿನಿಯರ್. ಭಜನಾ ಕೋಲ್ಮಿಂಚು ಅಂತನೆ ಕರಾವಳಿಯಲ್ಲಿ ಪ್ರಸಿದ್ದಿ. ತನ್ನ ಸ್ವರ ಮಧುರ್ಯದಲ್ಲಿ ರಾಮನ ಕೀರ್ತನೆಗಳನ್ನು ಹಾಡಿದರೆ ಭಕ್ತಿಯಲ್ಲಿ ತಲೆದೂಗದವರಿಲ್ಲ. ರಾಮ ಕೊಟ್ಟ ಕಂಠಸಿರಿಯನ್ನು ರಾಮನ ಸೇವೆಗೆ ಮುಡಿಪಾಗಿ ಇಟ್ಟಿದ್ದಾನೆ ಈ ಯುವಕ. ಈ ಅದ್ಭುತ ಪ್ರತಿಭೆಗೆ ವೇದಿಕೆ ದೊರೆತದ್ದು 1943 ರಲ್ಲಿ ಸ್ಥಾಪಿತವಾಗಿ 75 ವರ್ಷಗಳ ಅಮೃತಮಹೋತ್ಸವ ಆಚರಿಸಿಕೊಂಡು ಪಡುಕಡಲ ತೀರದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀರಾಮ ತಾರಕ ಕೋಟಿ ಲೇಖನ ಮಹಾಯಜ್ಞ ಮಾಡಿ ಸಂಪನ್ನ ಗೊಳಿಸಿದ ಕರಾವಳಿಯ ಗುರುಸ್ಥಾನಿಯ ಮಂದಿರ ಅನ್ನಿಸಿಕೊಂಡಿರುವ ಶ್ರೀ ರಾಮ ಭಜನಾ ಮಂದಿರ ಬೀಜಾಡಿ ಗೋಪಾಡಿ ಯಲ್ಲಿ.
ಭಜನಾ ರಂಗದ ಗಂಧರ್ವ ರಾಮೈಕ್ಯ ಭಜನೆ ರಾಮಣ್ಣ ನಂತಹ ಅತಿರತರ ಗರಡಿಯಲ್ಲಿ ಬೆಳೆದ ಪ್ರತಿಭೆ ಮಹೇಶ್ ಕುಂದರ್… ತನ್ನ ಭಜನೆಯಿಂದಲೇ ಅನೇಕ ಅಭಿಮಾನಿಗಳನ್ನು ಗಳಿಸಿರುವ ಮಹೇಶ ಗೆ ದಾಸರ ಹೆಚ್ಚಿನ ಭಜನೆಗಳು ಕಂಠಸ್ಥಾಯಿ ಆಗಿದೆ.
ಭಜನೆಯ ಜೊತೆಗೆ ಅದರ ಭಾವಾರ್ಥ ವನ್ನು ಹೇಳುವ ಈತ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಭಜನೆಯನ್ನು ಹಾಡಿ ಸೈ ಅನ್ನಿಸಿಕೊಂಡಿದ್ದಾನೆ.. ತಮಿಳಿನಲ್ಲಿ ಮಹೇಶ್ ಹಾಡಿದ ಅಯ್ಯಪ್ಪ ಸ್ವಾಮಿಯ “ಪಳ್ಳಿ ಕಟ್ಟಿ” ಭಜನೆಯು ಹಾಗೂ ತೆಲುಗಿನಲ್ಲಿ ವೆಂಕಟೇಶ್ವರ ಸ್ವಾಮಿಯ ನಂದಕ ಖಡ್ಗದ ಅವತಾರ ವೆಂದೇ ನಂಬುವ ದಾಸರಾದ “ಅಣ್ಣಮಯ್ಯ” ರವರ ರಚಿತ ಬ್ರಹ್ಮಮೊಕ್ಕಟ್ಟೆ ಗೀತೆಯೂ ಕೊಡ ಹಿಂದೊಮ್ಮೆ ಜನ ಮನ್ನಣೆಗೊಳಿಸಿತ್ತು…
ಆಧುನಿಕತೆಯ ತಂತ್ರಜ್ಞಾನದ ಸೊಗಡಿಗೆ ತನ್ನ ಮೂಲ ಸಂಪ್ರದಾಯಗಳನ್ನು ಮರೆಯುತ್ತಿರುವ ಯುವಜನತೆಯ ಹೋಲಿಸಿದರೆ ಮಹೇಶನಂತೆ ಭಜನೆಯನಲ್ಲಿ ತೊಡಗಿಸಿಕೊಂಡಿರುವ ಯುವಕರು ಆಸ್ತಿಕರಾದ ನಮಗೆಲ್ಲ ಹೆಮ್ಮಯೇ ಸರಿ…
ಮಹೇಶ್ ಕುಂದರ್ ರವರ ರಾಮನಾಮ ಸ್ಮರಣೆಯ ವೈರಲ್ ಆಗಿರುವ ಆ ವಿಡಿಯೋವನ್ನು ಚಿತ್ರಿಕರಿಸಿದ ಬಿಂದು ಸ್ಟೂಡಿಯೋ ದ ನಾಗೇಶ್ ರವರಿಗೂ ಧನ್ಯವಾದ ಗಳು. ಹಾಗೆಯೇ ಪ್ರತಿಭೆಗೆ ಬೇಕು ಪ್ರೋತ್ಸಾಹವೆಂಬಂತೆ ವೀಡಿಯೋ ಶೇರ್ ಮಾಡಿ ಕಾಮೆಂಟ್ ಮಾಡಿ ಹರಿಸಿದ ಎಲ್ಲರಿಗೂ ಧನ್ಯವಾದಗಳು.
ಮಹೇಶ್ ನಂತೆ ಅದ್ಭುತ ಪ್ರತಿಭೆ ಹೊಂದಿರುವ ಎಲ್ಲಾ ಭಜನಾ ಹಾಡುಗಾರರು ಯಶಸ್ಸು ಕಾಣಲೆಂದು ರಾಮರಲ್ಲಿ ಬೇಡುತ್ತಾ..
ಭರತ್ ಶ್ರೀನಿವಾಸ್ ಕುಂದರ್, ಚಾತ್ರಬೆಟ್ಟು.