ಬೆಂಗಳೂರು (ಏ. 30): ದೇಶದಲ್ಲಿ ಕೊರೋನಾ ಎರಡನೆ ಅಲೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ನಾರಾಯಣ ಹೃದಯಾಲಯ ಸ್ಥಾಪಕ ಡಾ. ದೇವಿ ಪ್ರಸಾದ್ ಶೆಟ್ಟಿ ಮುನ್ಸೂಚನೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ನರ್ಸಗಳು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೇವಲ 75,000 ರಿಂದ 90,000 ಐಸಿಯು ಹಾಸಿಗೆಗಳು ಮಾತ್ರ ಇವೆ. ಇನ್ನು ಎರಡನೇ ಅಲೆ ಇಗಾಗಲೇ ಉತ್ತುಂಗಕ್ಕೇರಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ದಿನಕ್ಕೆ ಸುಮಾರು 3.5 ಯಿಂದ 4 ಲಕ್ಷದವರೆಗೂ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಪ್ರಸ್ತುತ ಈ ಸಾಂಕ್ರಾಮಿಕ ರೋಗವು ಮುಂದಿನ ಹಲವು ತಿಂಗಳು ಇರಲಿದ್ದು, ನಂತರ ನಾವು ಮೂರನೇ ಅಲೆಗೂ ಸಿದ್ಧರಾಗಿರಬೇಕು” ಆ ಕುರಿತು ಈಗಾಗಲೇ ಪೂರ್ವ ತಯಾರಿಯೊಂದಿಗೆ ಸನ್ನದ್ದರಾಗಬೇಕಿದೆ ಎಂದು ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.