ಕುಂದಾಪುರ (ಮೇ, 1):ಕುಂದಾಪುರದ ಕುಂದೇಶ್ವರ ದೇವಸ್ಥಾನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿ.ಎ,ಸಿ.ಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯಾಗಿದ್ದು ಸಿ.ಎ-ಸಿ.ಎಸ್ ನಂತಹ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ.ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿ.ಎ.ಸಿ.ಎಸ್ ಕೋರ್ಸುಗಳಲ್ಲಿ ಈ ಗಾಗಲೇವಿಶಿಷ್ಟ ಸಾಧನೆ ಗೈದಿರುತ್ತಾರೆ. ಕೋವಿಡ್ ನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಸಂಸ್ಥೆಯು ತನ್ನ ಈಗಿನ ವಿದ್ಯಾರ್ಥಿಗಳಿಗೆ ಲೈವ್ ಆನ್ ಲೈನ್ ತರಗತಿಯನ್ನು ನಡೆಸುತ್ತಿದ್ದು ಜೂನ್ ನಲ್ಲಿ ಬರುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿದೆ.
ಮೇ. 03 ರಂದು ಉಚಿತ ವೆಬಿನಾರ್ ಆಯೋಜನೆ ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಆನ್ ಲೈನ್ ತರಗತಿಗೆ ಸೀಮಿತವಾಗಿದ್ದು, ಈ ಸಂದರ್ಭದಲ್ಲಿ ಶಿಕ್ಷ ಪ್ರಭಾ ಅಕಾಡೆಮಿ ಸಿ.ಎ/ಸಿ.ಎಸ್ ಕೋರ್ಸುಗಳ ಪರೀಕ್ಷೆ ಪೂರ್ವ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಉಚಿತ ವೆಬಿನಾರ್ ನ್ನು ಮೇ 3 ಸೋಮವಾರದಂದು ಹಮ್ಮಿಕೊಂಡಿದೆ. ಬೆಳಿಗ್ಗೆ 10:30 ರಿಂದ 11:30 ರ ತನಕ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಎಸ್ ರಮಾ ರಾವ್ ಪ್ರಾಕ್ಸಿಸಿಂಗ್ ಕಂಪೆನಿ ಸೆಕ್ರೆಟರಿ ಮತ್ತು ಸಿ.ಎ ದೀಪಿಕಾ ಚಾರ್ಟಡ್ ಅಕೌಂಟೆಂಟ್ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಿ.ಎ.,ಸಿಎಸ್ ಕೋರ್ಸುಗಳನ್ನು ಪೂರ್ಣಗೊಳಿಸಲು ಬೇಕಾಗುವಂತಹ ಅತ್ಯಮೂಲ್ಯ ಸಲಹೆಯನ್ನು ವೆಬಿನಾರ್ ಒಳಗೊಂಡಿರುತ್ತದೆ. ಆಸಕ್ತ ವಿದ್ಯಾರ್ಥಿ ಈ ವೆಬಿನಾರ್ ಪ್ರಯೋಜನವನ್ನು ಉಚಿತವಾಗಿ ಪಡೆಯಬಹುದಾಗಿದೆ.
ವೆಬಿನಾರ್ ರಿಜಿಸ್ಟ್ರೇಷನ್ ಗಾಗಿ 9965291755 ಸಂಖ್ಯೆಗೆ ಅಥವಾ www.shikshaprabha.com ಗೆ ಲಾಗಿನ್ ಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡ ನಂತರ ವಿದ್ಯಾರ್ಥಿಗಳಿಗೆ ವೆಬಿನಾರ್ ಐ.ಡಿ. ಮತ್ತು ಪಾಸ್ ವರ್ಡ್ ನೀಡಲಾಗುವುದು. ಸಿ.ಎ., ಸಿ.ಎಸ್ ಕೋರ್ಸುಗಳನ್ನು ಮಾಡಲು ಇಚ್ಛಿಸುವ ಯಾವುದೇ ತರಗತಿಯ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.