ಕವಿತೆ ಬಾರದ ನನಗೆ…ನೆನಪಿಗೆ
ಅದು ಎಳೆ ಬಿಸಿಲಿನ ಮುಸ್ಸಂಜೆಯ
ವೇಳೆಗೆ ಏಕೋ ಗೊತ್ತಿಲ್ಲ ನನಗೆ
ಕವಿತೆ ಬಾರದ ನನಗೆ…. ನೆನಪಿಗೆ…
ಹನಿ ಹನಿ ಇಬ್ಬನಿಯು ಮಳೆ
ಹನಿಯಾಗಿ ಬೀಳುವ ಸಮಯದಲ್ಲಿ
ಹಚ್ಚ ಹಸಿರಿನಿಂದ ಕೂಡಿದ ಹಚ್ಚ
ಹಸಿರಿನಲ್ಲಿ ಕವಿತೆ ಬಾರದ ನನಗೆ…ನೆನಪಿಗೆ…
ಹಸಿರ ಸೀರೆ ಉಟ್ಟು ಕೊಂಡು ನೀನು
ಕೈ ಗಳಿಗೆ ಹಸಿರ ಬಳೆ ಹಾಕಿ ಕೊಂಡು
ನಿಂತರೆ ಅದೇನೇ ಎಷ್ಟು ಸುಂದರವಾಗಿ
ಕಾಣತಿ ಕವಿತೆ ಬಾರದ ನನಗೆ ….ನೆನಪಿಗೆ…
ಕವಿತೆ ರಾಣಿ ನನ್ನ ಎರಡು ಕಣ್ಣುಗಳು
ಸಾಲದು ನಿನ್ನನ್ನು ನೊಡಲು ನನ್ನ ಕನಸಿನ
ಕಲ್ಪನೆಯ ಸುಂದರ ಕವಿತೆ ರಾಣಿ
ಎಷ್ಟು ನೋಡಿದರು ಕವಿತೆ ಬಾರದ ನನಗೆ ನೆನಪಿಗೆ…
ಏ ಪ್ರೀತಿಯರಸಿ ನಿ ಬಂದು ನನಗೆ
ಸಿಹಿಯಾದ ಮುತ್ತನ ಕೊಟ್ಟಾಗ
ನಿನ್ನ ರೂಪ ಲಾವಣ್ಯದ ಕುರಿತು
ಕವಿತೆ ನನಗೆ ನೆನಪಿಗೆ ಬರಬಹುದು…
ಕವಿತೆ ರಾಣಿ ನಿನಗೆ ರೋಮಾಂಚನ
ಆಗುವಾಗಿ ನಾ ಕವಿತೆಯನ ಬರೆಯಲೇ
ಬಾರೆ ನನ್ನ ಕನಸಿನ ಕವಿತೆ ರಾಣಿ
ತಡ ಮಾಡದೆ.. ನಿ ಬೇಗ ಬಾರೆ ಕವಿತೆ ರಾಣಿ…
ರಚನೆ
ಬಸವರಾಜ ಎಸ್. ಬಾಗೇವಾಡಿಮಠ. ರಾಣೆಬೇನ್ನೂರು. ಜಿಲ್ಲಾ: ಹಾವೇರಿ.