ಕುಂದಾಪುರ (ಮೇ, 7): ಕಳೆದ ಹತ್ತು ದಿನದಿಂದ ಜೆ.ಸಿ.ಐ. ಕುಂದಾಪುರ ಸಿಟಿ ವತಿಯಿಂದ ಕುಂದಾಪುರದ ಹಲವು ಕಡೆಯಲ್ಲಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಸಿದವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.
ಪ್ರತಿನಿತ್ಯ ನಡೆಯುವ ಈ ಸೇವಾ ಕಾರ್ಯದಲ್ಲಿ ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಹಾಗೂ ಜೆ.ಸಿ.ಐ. ಕುಂದಾಪುರ ಸಿಟಿಯ ಸದಸ್ಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.