ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು.
ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ ಮೆಚ್ಚುಗೆಗೆ ಪಾತ್ರರಾದರು.