ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಪುಟ್ಟ ಊರಿನಲ್ಲಿದೆ ನನ್ನ ಅಜ್ಜಿಮನೆ. ಪರೀಕ್ಷೆ ಮಗಿದು ಶಾಲೆಯ ರಜೆಯ ಸಮಯದಲ್ಲಿ ಅಜ್ಜಿಯ ಮನೆಗೆ ಹೋಗುವುದು ಆ ದಿನಗಳಲ್ಲಿನ ವಾಡಿಕೆ. ಅಜ್ಜಿಯ ಮನೆಗೆ ಹೋಗೋದೆಂದರೆ ಒಂದು ರೀತಿ ಪ್ರವಾಸಕ್ಕೆ ತೆರಳಿದ ಅನುಭವ. ಅತ್ಯಂತ ಪುರಾತನವಾದ ಅದರಲ್ಲೂ ವಿಶೇಷವಾಗಿ ಮಣ್ಣಿನಲ್ಲಿ ನಿರ್ಮಿಸಿದ ಇಂಗ್ಲೀಷನ L ಆಕಾರಾದ ಮನೆ ನನಗೆ ಅಚ್ಚುಮೆಚ್ಚು. 100 ವರ್ಷಗಳ ಈ ಪುರಾತನ ಮನೆಗೆ ಉಪ್ಪರಿಗೆಯ ಇದೆ. ಹಳೆಯ ಮನೆಯಾದ್ರೂ ಅಲ್ಲಿರುವ ಖುಷಿ, ನೆಮ್ಮದಿ ಮತ್ತು ಅಜ್ಜಿಯ ಪ್ರೀತಿ ಇಂದಿಗೂ ಮೆಲುಕು ಹಾಕುವುದು ಮಾತ್ರ!
ಅಜ್ಜಿಯ ಮನೆಯ ಜೊತೆಗೆ ಸುಮಾರು 5 ಎಕ್ರೆ ಜಾಗದಲ್ಲಿ ಕಾಡು ಮತ್ತು ಗದ್ದೆ ಬಯಲು ಪ್ರದೇಶ. ಅಲ್ಲಿ ಮಾವಿನ ಹಣ್ಣು, ಹಲಸಿನ ಹಣ್ಣು, ಗೇರು ಹಣ್ಣು, ನನಗೆ ಈ ಹಣ್ಣುಗಳೆಲ್ಲ ತುಂಬಾ ಇಷ್ಟ. ಗೆಳೆಯರು ಜೊತೆ ಸೇರಿ ಕೆಲವು ಸಂದರ್ಭಗಳಲ್ಲಿ ಕಾಡಿಗೆ ಹೋಗಿ ಕೆಲವು ಕಾಡು ಹಣ್ಣುಗಳನ್ನು(ಮುರಿನ್ ಹಣ್ಣು, ಗರ್ಚಿನ ಹಣ್ಣು ಹಾಗೂ ಇತರೆ ಹಣ್ಣುಗಳು) ಸಹ ತಿನ್ನುತ್ತಿದ್ದೆವು.
ಆ ದಿನಗಳು ಅವಿಸ್ಮರಣೀಯ.
ನಮ್ಮ ಅಜ್ಜಿಯ ಮನೆಯ ಪಕ್ಕದಲ್ಲಿ ಒಂದು ಮನೆ ಸಹ ಇತ್ತು ,ಅಲ್ಲಿಯ ಕೆಲವು ಸ್ನೇಹಿತರು ನಮ್ಮ ಮನೆಗೆ ಬರುತ್ತಿದ್ದರು. ಅವರೊಂದಿಗೆ ಆಟ ಅಡುವುದೇ ಒಂದು ಖುಷಿ. ನಾವು ಅಲ್ಲಿ ಕಳ್ಳ ಪೊಲೀಸ್, ಕಡ್ಡಿ ಆಟ, ಸೆಟ್ ಆಟ ಹೀಗೆ ಇನ್ನಿತರ ಆಟಗಳನ್ನು ಆಡಿದ್ದೇವು. ಆ ಮನೆಗೆ ಕರೆಂಟ್ ಇಲ್ಲದಿದ್ರೂ ಮನೆಯಲ್ಲಿ ಖುಷಿ ಸಿಗುತ್ತಿತ್ತು. ಸಂಜೆಯಾದ್ರೆ ಅಜ್ಜಿ ಹಚ್ಚುವ ದೀಪವೇ ನಮಗೆ ಕರೆಂಟ್. ಆ ದೀಪದೊಂದೆಗೆ ಕಳೆಯುದೇ ಒಂದು ಖುಷಿ ಕೊಡುವ ಸಮಯ. ಮನೆಯಲ್ಲಿ ಅಡುಗೆ ಮನೆ, ಚಾವಡಿ, ಒಂದು ಕೋಣೆ, ಮಹಡಿ ಮೇಲೆ ಒಂದು ಕೋಣೆ ಹಾಗೂ ಪಡಸಾಲೆ. ನಾವು ಕಾಫಿ ಕುಡಿಯುವುದು ,ಊಟ ಮಾಡುವುದು ಎಲ್ಲವೂ ಅಡುಗೆ ಮನೆಯಲ್ಲಿಯೇ .ಅದು ಮಣ್ಣಿನ ನೆಲವಾದ್ರೂ ಆ ಖುಷಿಯೇ ಬೇರೆ. ಆ ಮನೆಯಲ್ಲಿ ಹಪ್ಪಳ, ಸಂಡಿಗೆ ತಯಾರಿಸುತ್ತಿದ್ದೇವು. ಹಪ್ಪಳ ಮಾಡುವಾಗ ನಾವು ಆಟ ಆಡುತ್ತ ಅಮ್ಮನಿಗೆ ಅಜ್ಜಿಗೆ ಸಹಾಯ ಮತ್ತು ಕಿರಿಕ್ ಮಾಡುವುದು ಸಾಮಾನ್ಯವಾಗಿತ್ತು.. ಸಂಜೆ ಆದ್ರೆ ಗದ್ದೆಯಲ್ಲಿ ಕೆಲವು ಮಕ್ಕಳು ಕ್ರಿಕೆಟ್ ಅಡುತ್ತಿದ್ದೆವು …ಅ ಮಜಾನೇ ಬೇರೆ ಬಿಡಿ.
ಸಂಜೆಯಾದ್ರೆ ಮಾವ ಕೆಲಸದಿಂದ ಬರುತ್ತಿದ್ರು. ನನಗೆ ಮಾವನು ಕಥೆ ಹೇಳುತ್ತಿದ್ದರು .ಅದರಲ್ಲಿ ಅವರು ಮಹಾಭಾರತದ ಹಾಗೂ ರಾಮಾಯಣದ ಕಥೆ ಹೇಳುತಿದ್ದರು. ದೀಪದ ಸುತ್ತ ಕುಳಿತು ಕಥೆ ಕೇಳುವುದೇ ಸೊಗಸು. ಹಾಗೆಯೇ ದೀಪದ ಮುಂದೆ ಕುಳಿತು ಎಲ್ಲರು ಒಟ್ಟಿಗೆ ಕುಳ್ಳಿತು ಊಟ ಮಾಡುತ್ತಿದ್ದೆವು.
ಎಲ್ಲರೂ ಒಟ್ಟಿಗೆ ಪಡಸಾಲೆಯಲ್ಲಿ ಮಲಗುತ್ತಿದ್ದೆವು. ಅಲ್ಲಿ ಮಳೆಗಾಲದಲ್ಲಿ ಅಲ್ಲಿ ಮಳೆಯ ಹನಿಯ ಸದ್ದು ಹಾಗೆಯೇ ಅಲ್ಲಿಯೇ ಸನಿಹದಲ್ಲೇ ಒಂದು ಸಣ್ಣ ಜರಿ ನೀರು ಹೋಗುವ ಸದ್ದೇ ಒಂದು ಖುಷಿ.
ನನ್ನ ಅಜ್ಜಿ ಮನೆಯಲ್ಲಿ ಕಳೆದ ಪ್ರತಿ ನಿಮಿಷ ಸಹ ಸುಂದರ ಹಾಗೂ ಸುಮಧುರ ಕ್ಷಣಗಳು, ಆದರೆ ಈಗ ಅವುಗಳ ನೆನಪು ಮೆಲುಕು ಹಾಕುದು ಮಾತ್ರ್. ಆದ್ರೆ ಆ ನೆನೆಪುಗಳ ಇಂದಿಗೂ ಶಾಶ್ವತವಾಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಇಂತಿ,
(ನಾವಿಕ)
ನಾಗೇಂದ್ರ
Super ❤️😘