ಭೂಮಿ ತಾಯಿ ಸುತ್ತಲೂ ಹಸಿರನ್ನು ಹೊದಿಕೆ ಮಾಡಿಕೊಂಡು ಕಣ್ಣ್ಮನ ನಾಚುವಂತೆ ಮನಸ್ಸಿಗೆ ಮುದ ನೀಡುತ, ಒಂದು ಕಡೆ ನೋಡಿದರೆ ಶ್ರೀ ಮೂಕಾಂಬಿಕಾ ಅಭಯಾರಣ್ಯ, ಮಧ್ಯದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಲವು ಸಾವಿರಾರು ಪ್ರಭೇದದ ಔಷಧಿ ಸಸ್ಯರಾಶಿಯಿಂದ ಕಂಗೊಳಿಸುವ ಸಸ್ಯಕಾಶಿ, ಮತ್ತೊಂದು ಕಡೆಯಿಂದ ನೋಡಿದರೆ ಕೊಡಚಾದ್ರಿ ಬೆಟ್ಟದ ತುತ್ತತುದಿಯ ಮಧ್ಯದಿಂದ ರುದ್ರ ರಮಣೀಯವಾಗಿ ಅಂಕುಡೊಂಕಾಗಿ ಹಾಲ್ನೊರೆಯಂತೆ ಜುಳು ಜುಳು ಶಬ್ದನಾದದಂತೆ ಹರಿಯುವ ನೀರನಲ್ಲಿ ಲಕ್ಷಾಂತರ ವಿವಿಧ ಬಣ್ಣ,ಪ್ರಭೇದದ ಜಲಚರಗಳ ಬದುಕಿಗೆ ಆಹಾರ ನೀಡಿ ಚೆಂದದ ಬದುಕಿಗೆ ದಾರಿನೀಡುವ ಸೌಪರ್ಣಿಕಾ ನದಿ .
ನದಿ ತೀರದ ತಂಪಾದ ತಂಗಾಳಿಯಲ್ಲಿ ವಿಹರಸುತ್ತ ನಾಟ್ಯವಾಡುವ ನವಿಲುಗಳ ನರ್ತನದ ಸೊಬಗು ಜೊತೆಗೆ ಮನ ನರವಿರೇಳಿಸುವ ಕುಣಿಯುವುದು ನೊಡವುದೇ ಬಲು ಚೆಂದ.
ಚಿಲಿಪಿಲಿಗುಟ್ಟುವ ಸಾವಿರಾರು ಬಗೆಯ ಪಕ್ಷಿಸಂಕುಲಗಳು, ಸ್ವಚ್ಚಂದವಾಗಿ ವಿಹರಿಸುವ ಕಾಡು ಪ್ರಾಣಿಗಳ ಹಿಂಡು. ಸುತ್ತ ಮುತ್ತಲಿನ ವಿಹಂಗಮ ನೋಟದ ಭೂಮಿ ತಾಯಿಯ ಸೊಬಗಿಗೆ ಎಂತಹ ನೋವುಗಳನ್ನು ಒಂದು ಕ್ಷಣ ಮಾತ್ರದಲ್ಲಿ ಮರೆಸಿ ಸಂತೋಷ ಹೊನಲನ್ನು ಮುಖದಲ್ಲಿ ತರಿಸುವ ಶಕ್ತಿ ಇರುವ ಪ್ರಕೃತಿ ಮಾತೆಯ ಮಡಿಲು ನಮ್ಮೂರು.
ನಮ್ಮೂರ ಸುತ್ತ ಹಲವು ದೈವ ದೇವಸ್ಥಾನಗಳ ಸಾಲು, ಪೇಟಯಿಂದ ಸ್ವಲ್ಪ ದೂರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು. ದೇವಸ್ಥಾನ ದರ್ಶನಕ್ಕೆ ಸೋಮವಾರ ಹಾಗೂ ವಿಷೇಶ ದಿನದಂದು ಸಾಲು ಸಾಲು ಭಕ್ತರು ನೋಡುವುದೆ ಚಂದ. ಮತ್ತೆ ಕಾಡಿನ ಮಧ್ಯದಲ್ಲಿ ತಾಯಿ ಶ್ರೀ ವನದುರ್ಗಪರಮೇಶ್ವರಿ ದೇವರ ದೇವಸ್ಥಾನ. ಅಲ್ಲಿ ಶುಕ್ರವಾರ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ತಾಯಿಯ ದರ್ಶನ ಪಡೆಯುವುದೆ ಸಂತೋಷದ ಕ್ಷಣ. ನಮ್ಮೂರಿನ ಮುಖ್ಯ ದೈವಸ್ಥಾನದಲ್ಲಿ ಒಂದಾದ ಪೇಟೆಯಿಂದ ಸುಮಾರು ಒಂದುವರೆ ಕೀಲೋಮೀಟರ್ ದೂರದ ರಸ್ತೆಯ ಪಕ್ಕದಲ್ಲಿ ಇರುವ ಶ್ರೀ ಹೈಗುಳಿ ದೇವಸ್ಥಾನದಲ್ಲಿ ಸಂಕ್ರಮಣ ಪೂಜೆಯೊಂದಿಗೆ ದೈವಮೈದರ್ಶನ, ಅನ್ನಸಂತರ್ಪಣಿ ನಾಗದೇವರ ಪೂಜೆ ,ಭಜನೆ,ಯಕ್ಷಗಾನ ಇತ್ಯಾದಿಗಳನ್ನು ನೋಡಿದರೆ ನಮಗದೆ ಸ್ವರ್ಗ.
ಊರಿನ ಪೇಟೆಯಲ್ಲಿನ ವಿದ್ಯಾದೇಗುಲಕ್ಕೆ ಹೋಗಿಬರುವ ನೆನಪುಗಳೇ ಅವಿಸ್ಮರಣೀಯ. ಬಾಲ್ಯದಲ್ಲಿ ಶಾಲೆಗೆ ಹೋಗಿಬರುವಾಗ ಮಾಡುವ ತುಂಟಾಟ, ಹಿರಿಯರು ಮಾರ್ಗದರ್ಶನ, ನಮ್ಮೂರಿನ ಅಧ್ಯಾಪಕರಾಗಿ, ವಕೀಲರು, ಡಾಕ್ಟರ್, ಸರ್ಕಾರಿ ಅಧಿಕಾರಿಗಳು ರಾಜಕೀಯ ಮತ್ತು ವಿವಿಧ ಕ್ಷೇತ್ರದಲ್ಲಿ ತುಂಬಾ ಹಿರಿಯರು ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮಂತೆ ಹೆಚ್ಚಿನವರು ಸ್ವಲ್ಪ ಮಟ್ಟಿನ ವಿದ್ಯಾಭ್ಯಾಸ ಪಡೆದು ಹೊಟ್ಟೆ ಪಾಡಿಗಾಗಿ ದೂರದ ಊರಿನಲ್ಲಿ ಜೀವನ ಕಟ್ಟಿಕೊಂಡು ಬದುಕು ಸಾಗಿಸುತ್ತ ದೇವಸ್ದಾನದ ಜಾತ್ರೆಗೆ, ಮನೆಯಲ್ಲಿ ಅಥವಾ ಬಂಧುಗಳ ಮನೆಯಲ್ಲಿ ನಡೆಯು ಮದುವೆ ಯಕ್ಷಗಾನ ಇತ್ಯಾದಿಗಳಿಗೆ ಬಂದು ನಾಲ್ಕು ದಿನದ ಅಥವಾ ಒಂದು ವಾರ ಇದ್ದು ಹುಟ್ಟೂರು ಸುತ್ತಿಕೊಂಡು ಹಳೆ ಗೆಳೆಯರ ಭೇಟಿ ಮಾಡಿಕೊಂಡು ಮತ್ತೆ ತಮ್ಮ ಬದುಕು ಕಟ್ಟಿಕೊಟ್ಟ ಪರವೂರಿಗೆ ಒಲ್ಲದ ಮನಸ್ಸಿನಲ್ಲಿ ಹೋಗ ಬೇಕಾದ ಅನಿರ್ವಾಯ ಪರಸ್ದಿತಿ ಇಂತಹ ಎಲ್ಲ ಜೀವನದಲ್ಲಿ ನೋಡುವ ನಮಗೆ ಕೊನೆಯಲ್ಲಿ ಅನಿಸಿದ್ದು ಒಂದು ಹೊತ್ತು ಊಟ ಮಾಡಿ ಊರಿನ ಕೆರೆಯ ನೀರು ಕುಡಿದು ಬದುಕಿದರು ನಮ್ಮೂರು ನಮಗೆ ಚಂದ
ಎ ಎಸ್ ಪೂಜಾರಿ
ಕಾಡಿನಕಲ್ಲು
ಇಡೂರು ಕುಂಜ್ಞಾಡಿ