ಸಾಹಿತ್ಯದಲ್ಲಿ ಸಾಧನೆ ಮಾಡುವುದು ಒಂದು ವಿಶಿಷ್ಟವಾದ ಕಲೆ. ಈ ಸಾಹಿತ್ಯ ಎನ್ನುವುದು ಯಾರಿಗೆ ಯಾವ ಸಂಧರ್ಭದಲ್ಲಿ ಹೇಗೆ ಒದಗಿ ಬರುತ್ತದೆಂದು ಯಾರಿಗೂ ಹೇಳಲು ಸಾಧ್ಯವಾಗದು. ಇನ್ನೂ ಮನುಷ್ಯ ಭೂಮಿ ಮೇಲೆ ಜನಿಸಿದ ಮೇಲೆ ನಾವು ಏನಾದರೊಂದು ಸಾಧನೆ ಮಾಡಬೇಕೆಂದು ಆತ್ಮ ವಿಶ್ವಾಸ ಇದ್ದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎನ್ನುವುದನ್ನು ಕಂಡುಕೊಂಡವರು ಕುಮಾರಿ ಜಯಶ್ರೀ.
ತಮ್ಮ ಶಿಕ್ಷಣ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳಸಿ ಕೊಂಡು ರಾಜ್ಯ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆಯವರಾಗಿರುವ, ಜಯಶ್ರೀಯವರು ಮೂಲತಃ ಶ್ರೀಶೈಲ ಅವಟಿಯವರು. ಇವರ ತಂದೆಯ ಹೆಸರು ಶ್ರೀಶೈಲ, ತಾಯಿ ಶಾಂತಾ .ಈ ದಂಪತಿಗಳಿಗೆ ಸುಪುತ್ರಿಯಾಗಿ ಜಯಶ್ರೀಯವರು ಬೆಳಗಾವಿ ಜಿಲ್ಲೆಯ ಅಥಣಿ, ಕೊಡಗನೂರ ಗ್ರಾಮದಲ್ಲಿ ಜನಿಸಿದ ನಂತರ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯನ್ನು ಕೊಡಗಾನೂರ ಪಕ್ಕದ ಬಳವಾಡ ಗ್ರಾಮದಲ್ಲಿ ಮುಗಿಸಿ ಕೊಂಡು ಬೆಂಗಳೂರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಜಯಶ್ರೀಯವರು ‘ಐಎಎಸ್’ ಆಧಿಕಾರಿಯಾಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ನಿಜಕ್ಕೂ ಇದು ಹೆಮ್ಮೆ ಪಡುವ ವಿಷಯವಾಗಿದ್ದು, ಇನ್ನೂ ಜಯಶ್ರೀಯವರು ತಮ್ಮ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಸಾಹಿತ್ಯದ ಕಡೆ ಆಸಕ್ತಿ ತೋರಿಸಿಕೊಂಡು ಚುಟುಕು ಕವನ, ಹನಿಗವನ, ಕವನ, ಹಾಗೂ ಕಥೆ, ಬರೆಯುವುದರ ಜೊತೆಗೆ ಇವರು ಕಾದಂಬರಿಯನ್ನು ಸಹ ಪ್ರೇರಣೆ ಬರೆದಿದ್ದಾರೆ.
ಇವರು, ೨೦೧೯ ರಲ್ಲಿ ರಚಿಸಿದ ‘ಭಾವಯಾನ’ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಇವರು ಅನೇಕ ಕಥೆ, ಕವನಗಳು ಕವನ ಸಂಕಲನಗಳ ರೂಪದಲ್ಲಿ ಪ್ರಕಟನೆ ಆಗಿರುತ್ತವೆ. ಇವರ ಅನೇಕ ಸಾಹಿತ್ಯ ರಚನೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಜಿಲ್ಲೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
ಜಯಶ್ರೀಯವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದೆ.’ಇವರಿಗೆ ದೊರಕಿದ ಪ್ರಶಸ್ತಿಗಳು’ ಕನಕಶ್ರೀ ಸಾಹಿತ್ಯ ಪ್ರಶಸ್ತಿ (ರಾಜ್ಯ ಪ್ರಶಸ್ತಿ) ಆದಿಕವಿ ಪಂಪ ರಾಜ್ಯ ಪ್ರಶಸ್ತಿ ಲಭಿಸಿದೆ.ಈ ಉದಯೋನ್ಮುಖ ಕವಯಿತ್ರಿಯವರಿಗೆ ಇನ್ನೂ ಹಲವಾರು ಪ್ರಶಸ್ತಿಗಳು ಗೌರವ ಲಭಿಸಲಿ ಎನ್ನುವ ಶುಭ ಹಾರೈಕೆಯೊಂದಿಗೆ
ಲೇಖಕರು
ಬಸವರಾಜ ಎಸ್. ಬಾಗೇವಾಡಿಮಠ.
ರಾಣೆಬೇನ್ನೂರು. ಜಿಲ್ಲಾ: ಹಾವೇರಿ.