ಶಿಕ್ಷಕ ವ್ರತ್ತಿ ಶ್ರೇಷ್ಠ ವ್ರತ್ತಿ. ಉತ್ತಮ ನಾಗರಿಕ ಸಮಾಜವನ್ನು ಸ್ರಷ್ಟಿ ಮಾಡುವವರೇ ನಮ್ಮ ಶಿಕ್ಷಕರು. ಆದರೆ ಶಿಕ್ಷಕ ವ್ರತ್ತಿಯಲ್ಲೂ ಖಾಯಂ ಶಿಕ್ಷಕ ಮತ್ತು ಅತಿಥಿ ಶಿಕ್ಷಕ ಎಂಬ ತಾರತಮ್ಯ ಇದೆ ಎಂದು ಅನುಭವ ಬಂದಿರುವುದು ನಾನು ಶಿಕ್ಷಕಿಯಾದಾಗ. ಖಾಸಗಿ ಶಾಲೆಯಲ್ಲಿ ನಾನು ವ್ಯಾಸಂಗ ಮಾಡುತ್ತಿದ್ದಾಗ, ಅಲ್ಲಿಯ ಶಿಕ್ಷಕರಲ್ಲಿ ನಾನೆಂದು ತಾರತಮ್ಯ ಕಂಡಿಲ್ಲ. ಆದರೆ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಈ ಖಾಯಂ ಶಿಕ್ಷಕ ಮತ್ತು ಅತಿಥಿ ಶಿಕ್ಷಕ ಎಂಬ ತಾರತಮ್ಯ ಸ್ವಲ್ಪ ಮಟ್ಟಿಗೆ ಗಮನಿಸಿದ್ದೇನೆ. ನಾನು ಶಿಕ್ಷಕ ವ್ರತ್ತಿಗೆ ಕಾಲಿಟ್ಟಾಗಲೇ ನಿಜವಾಗಲೂ ಅತಿಥಿ ಶಿಕ್ಷಕರ ಬದುಕಿನ ಪಯಣ ಏನೆಂಬುದು ಅರ್ಥವಾಗಿದೆ. ಖಾಯಂ ಶಿಕ್ಷಕರಂತೆ ಅತಿಥಿ ಶಿಕ್ಷಕರು ಕೂಡ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕ ವೃತ್ತಿಗೆ ಬಂದಿರುತ್ತಾರೆ. ಆದರೆ ಅವರನ್ನು “ಅತಿಥಿ ಶಿಕ್ಷಕರು” ಎಂದು ಹಣೆಪಟ್ಟಿ ಕಟ್ಟಿ , ಗೌರವಧನದ ಮೂಲಕ ಅಳೆಯುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ.
ಶಿಕ್ಷಕ ವ್ರತ್ತಿಯಲ್ಲೇ ತಾರತಮ್ಯ ಇಟ್ಟುಕೊಂಡು ಮಕ್ಕಳಿಗೆ ಭೋಧನೆ ಮಾಡುವಾಗ ತಾರತಮ್ಯ ಮಾಡಬಾರದು ಎಂದು ನೀತಿ ಹೇಳುವುದು ಅರ್ಥಹೀನ. ಪ್ರತಿಯೊಬ್ಬ ಶಿಕ್ಷಕರು ಸಮಾನರು, ಎಲ್ಲರೂ ಅವರವರ ವಿಷಯವನ್ನು ಬೋಧಿಸುತ್ತಾರೆ, ಕೆಲಸವನ್ನು ನಿರ್ವಹಿಸುತ್ತಾರೆ, ಮಕ್ಕಳೊಡನೆ ಬೆರೆಯುತ್ತಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಅತಿಥಿ ಶಿಕ್ಷಕರಿಗೂ, ಖಾಯಂ ಶಿಕ್ಷಕರಂತೆ ಕುಟುಂಬಗಳಿವೆ, ಜವಬ್ದಾರಿಗಳಿವೆ ಎನ್ನುವುದನ್ನು ಮರೆತು ಬಿಟ್ಟಿದೆ. ಕೆಲವೊಮ್ಮೆ ಮಾನವೀಯತೆ ಸತ್ತು ಹೋಗಿದೆಯಾ ಅನಿಸುತ್ತೆ. ಎಷ್ಟೋ ಅತಿಥಿ ಶಿಕ್ಷಕರು ಕೊರೋನಾ ಸಂದರ್ಭದಲ್ಲಿ ವೇತನ ಸಿಗದೆ ಆತ್ಮಹತ್ಯೆ ಮಾಡಿಕೊಂಡರು. ಆದರೆ ಅತಿಥಿ ಶಿಕ್ಷಕ ಕಲಿಸಿದ ವಿದ್ಯಾರ್ಥಿಗಳು ಉತ್ತಮ ವ್ರತ್ತಿಯಲ್ಲಿದ್ದು ವೇತನ ಪಡೆದುಕೊಳ್ಳುತ್ತಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಶಿಕ್ಷಕರಾಗಬೇಕೆನ್ನುವ ಹಂಬಲದಲ್ಲಿ ಶಿಕ್ಷಕ ವ್ರತ್ತಿಗೆ ಬಂದಿರುತ್ತಾರೆ. ಆದರೆ ಈ ಅತಿಥಿ ಶಿಕ್ಷಕ ಎಂಬ ಹಣೆ ಪಟ್ಟ ಯಿಂದ ಅದೆಷ್ಟೋ ಶಿಕ್ಷಕರಿಗೆ ಶಿಕ್ಷಕ ವ್ರತ್ತಿಯ ಮೇಲೆ ನಿರಾಸಕ್ತಿ ಬರುವಂತಾಗಿದೆ. ತಾಳ್ಮೆ ಎನ್ನುವ ವಿಷಯ ಬಂದಾಗ ಪುರಾಣ ಕಥೆಗಳ ಪಾತ್ರವನ್ನು ನಿದರ್ಶನ ನೀಡುವ ಬದಲು ನಮ್ಮ ಕಣ್ಣೆದುರಿಗೆ ಇರುವ ಅತಿಥಿ ಶಿಕ್ಷಕರೇ ನಿದರ್ಶನ ನೀಡಬಹುದು. “ಸರಿಯಾದ ಕೆಲಸಕ್ಕೆ ಸರಿಯಾದ ವೇತನ” ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ನಾನು ವಿದ್ಯಾರ್ಥಿಯಾಗಿ, ನನಗೆ ಕಲಿಸಿದ ಅತಿಥಿ ಶಿಕ್ಷಕರಿಗೆ ಗೌರವ ಸಿಗಬೇಕು, ನಾನು ಶಿಕ್ಷಕಿಯಾಗಿ, ಎಲ್ಲಾ ಅತಿಥಿ ಶಿಕ್ಷಕರಿಗೂ ಗೌರವ ಸಿಗಬೇಕು ಎನ್ನುವುದು ನನ್ನ ಬಲವಾದ ಬೇಡಿಕೆ. ಖಾಯಂ ಶಿಕ್ಷಕರಷ್ಷೇ ನಮಗೂ ಗೌರವ ಮತ್ತು ಜವಾಬ್ದಾರಿ ಇದೆ. ಈ ಕರೋನಾ ಲಾಕ್ಡೌನ್ ಸಮಯದಲ್ಲಿ ಅತಿಥಿ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಶಿಕ್ಷಣ ಇಲಾಖೆ ಮಾಡಲೇ ಇಲ್ಲ. ಶಿಕ್ಷಕ ವ್ತತ್ತಿಯಲ್ಲಿನ ಈ ದೊಡ್ಡ ಮಟ್ಟದ ತಾರತಮ್ಯ ನನಗೆ ಶಿಕ್ಷಕ ವ್ರತ್ತಿಯಲ್ಲಿ ನಿರಾಸಕ್ತಿ ಉಂಟಾಗುವಂತೆ ಮಾಡಿದೆ.
ನೊಂದ ಶಿಕ್ಷಕ