2012 ರಲ್ಲಿ ಎಮ್. ಮಹೇಶ ಹೆಗ್ಡೆ ಯವರಿಂದ ಸ್ಥಾಪನೆಗೊಂಡ “ಎಕ್ಸಲೆಂಟ್ ಪಿ.ಯು. ಕಾಲೇಜ್, ಸುಣ್ಣಾರಿ” ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ. ಕೇವಲ ಕುಂದಾಪುರ-ಉಡುಪಿ ಪರಿಸರದ ವಿದ್ಯಾರ್ಥಿಗಳು ಮಾತ್ರವಲ್ಲದೇ ರಾಜ್ಯ-ಹೊರ ರಾಜ್ಯದಿಂದಲೂ ಈ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಜನೆಗೆ ಆಗಮಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ನಿದರ್ಶನ.
ಸ್ಥಾಪನೆಗೊಂಡ ಕಿರು ಅವಧಿಯಲ್ಲಿಯೇ ಅತಿ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು, ಐಐಟಿ ವಿದ್ಯಾರ್ಥಿಗಳು ಮತ್ತು ಸಿಎ ವಿದ್ಯಾರ್ಥಿಗಳನ್ನು ಈ ಸಂಸ್ಥೆ ರೂಪಿಸಿದೆ. ಸಂಸ್ಥೆಯಲ್ಲಿ ಹಾಸ್ಟೆಲ್ ಸೌಲಭ್ಯ ಲಭ್ಯವಿದ್ದು, ಈಗಾಗಲೇ ಕರ್ನಾಟಕ ಮಾತ್ರವಲ್ಲದೆ, ದೂರದ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾರ್ಜನೆಯಲ್ಲಿ ನಿರತರಾಗಿದ್ದಾರೆ.
ನೂತನ ಆಡಳಿತದೊಂದಿಗೆ ಎಕ್ಸಲೆಂಟ್ ಪಿಯು ಕಾಲೇಜು ಸುಣ್ಣಾರಿ – ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆ ಸಾರಥ್ಯ:
ಸುದೀರ್ಘ 30 ವರ್ಷಗಳು ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವ ಹಾಗೂ ಮೂಡಬಿದಿರೆಯ ಶಿಕ್ಷಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸರಿಸುಮಾರು 21 ವರ್ಷಗಳ ಭೋಧಕರಾಗಿ ಅನುಭವ ಹೊಂದಿರುವುದ ಜೊತೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಪಾರ ಅನುಭವಗಳಿಸಿದ ಡಾ. ರಮೇಶ್ ಶೆಟ್ಟಿ ಯವರು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆಯ ಈ ಸಂಸ್ಥೆಯ ನಿರ್ದೇಶಕರಾಗಿ ಹಾಗೂ ಪ್ರಾಂಶುಪಾಲರಾಗಿ ಚುಕ್ಕಾಣಿ ಹಿಡಿಯಲು ಮುಂದಾಗಿರುವುದು ಸಂಸ್ಥೆಯ ವಿದ್ಯಾರ್ಥಿಗಳ ಪಾಲಿಗೆ ವರದಾನವೆನ್ನಬಹುದು.
ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ, ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ
ಇದರ ಯುವ ನಿರ್ದೇಶಕರುಗಳಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿಯವರು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ನೂತನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಹಾಗೂ ಶ್ರೀ ಭರತ್ ಶೆಟ್ಟಿ ಕೋಶಾಧಿಕಾರಿ ಯಾಗಿ ಸಂಸ್ಥೆಯ ಪ್ರಗತಿಗೆ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದಾರೆ.
ಉತ್ಸಾಹಿ, ಅನುಭವಿ ಹಾಗೂ ನುರಿತ ಭೋಧಕ ವ್ರಂದವನ್ನು ಹೊಂದಿರುವ ಈ ನೂತನ ತಂಡ ಪದವಿ ಪೂರ್ವ ಶಿಕ್ಷಣದ ಜೊತೆಗೆ ಸಿ.ಎ., ಸಿ.ಎಸ್. ಹಾಗೂ ಬ್ಯಾಂಕಿಂಗ್ ತರಬೇತಿಯನ್ನು ನೀಡಲು ಸಜ್ಜಾಗಿರವುದರ ಜೊತೆಗೆ ನಿರಂತರವಾಗಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಕಾಯ್ದುಕೊಂಡು ರಾಜ್ಯದಲ್ಲಿಯೇ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮುವ ಉತ್ಸಾಹದಲ್ಲಿದೆ .
ಎಕ್ಸಲೆಂಟ್ ಪಿಯು ಕಾಲೇಜಿಗೆ ಸೇರ್ಪಡೆ ಹೊಂದುವ ಪ್ರತಿಯೊಬ್ಬ ವಿದ್ಯಾರ್ಥಿಯು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು.ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಮಹತ್ವವನ್ನು ನೀಡಿ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಸಂಸ್ಥೆಯ ಉದ್ದೇಶ.
ಪದವಿ ಪೂರ್ವ ವಿಭಾಗದ ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ., ಪಿ.ಸಿ.ಎಂ.ಎಸ್. ಮತ್ತು ವಾಣಿಜ್ಯ ವಿಭಾಗದಲ್ಲಿ ಇ.ಎ.ಬಿ.ಸಿಎಸ್, ಇ.ಎ.ಬಿ.ಎಸ್. ಮತ್ತು ಇ.ಎ.ಬಿ.ಎಂ ಕಾಂಬಿನೇಶನ್ನಲ್ಲಿ ಕಲಿಕೆಯ ಅಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಇಂಗ್ಲಿಷ್ ಭಾಷೆಯ ಜೊತೆಗೆ ಕನ್ನಡ, ಹಿಂದಿ ಅಥವಾ ಸಂಸ್ಕೃತ ಭಾಷಾ ವಿಷಯದ ಆಯ್ಕೆಗೆ ಅವಕಾಶವಿದೆ.
ವಿಜ್ಞಾನ ವಿಭಾಗದ ಎಲ್ಲಾ ವಿಷಯಗಳಿಗೆ ಮಂಗಳೂರು, ಮೂಡಬಿದಿರೆ ಮತ್ತು ಹೈದರಾಬಾದಿನಿಂದ ಅನುಭವಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು ಅವರೊಂದಿಗೆ ಎಕ್ಸಲೆಂಟ್ ಪಿಯು ಕಾಲೇಜಿನ ನಿರ್ದೇಶಕರು ಪ್ರಾಶುಪಾಲರಾಗಿರುವ ಡಾ. ರಮೇಶ ಶೆಟ್ಟಿ ಅವರ ನೇತ್ರತ್ವದಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಜ್ಞರಿಂದ ಇಂಟಿಗ್ರೇಟೆಡ್ ಸಿಐಟಿ, ನೀಟ್, ಜೆ.ಇ.ಇ., ಕೆ.ವಿ.ಪಿ.ವೈ. , ನಾಟಾ, ಎನ್.ಡಿ.ಎ., ಐಐಟಿ ಪರೀಕ್ಷೆಗಳಿಗೆ ಪ್ರಥಮ ಪಿಯುಸಿ ಇಂದಲೇ ತರಬೇತಿಯನ್ನು ಪ್ರಾರಂಭಿಸಿ, ಹೆಚ್ಚಿನ ಉತ್ತಮ ಅಂಕಗಳೊಂದಿಗೆ ವಿದ್ಯಾರ್ಥಿಗಳನ್ನು ತೇರ್ಗಡೆ ಗೊಳಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಕೋಶಾಧಿಕಾರಿ ಭರತ್ ಶೆಟ್ಟಿ ನೇತೃತ್ವದ ಶಿಕ್ಷ ಪ್ರಭಾ ತಂಡ ಅನೇಕ ವಾಣಿಜ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಮತ್ತು ಪೋಷಕರ ಮೆಚ್ಚುಗೆಗೆ ಪಡೆದಿದೆ. ಇದರ ಸಿಎ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ 21 ಮತ್ತು 27ನೇ ರಾಂಕ್ ಪಡೆದಿದ್ದಾರೆ. ಪ್ರಥಮ ಸಿ.ಎಸ್. ಬ್ಯಾಚ್ ಶೇಕಡ 100 ರಷ್ಟು ಫಲಿತಾಂಶ ನೀಡಿರುತ್ತದೆ. ಅದೇ ರೀತಿಯ ಗುಣಮಟ್ಟದ ತರಬೇತಿಯನ್ನು ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಪಿಯುಸಿ ಇಂದಲೇ ಸಿಎ, ಸಿಎಸ್ ಮತ್ತು ಸಿಎಂಎ ಪರೀಕ್ಷೆಗೆ ತರಬೇತಿಯನ್ನು ಪಡೆದು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದಾಗಿದೆ. ಬ್ಯಾಂಕಿಂಗ್ ಮತ್ತು ಎಂಬಿಎ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಪಿಯುಸಿ ಇಂದಲೇ ಐಬಿಪಿಎಸ್ ಫೌಂಡೇಶನ್ ಕ್ಯಾಟ್/ ಮ್ಯಾಟ್ /ಪಿಜಿಸಿಇಟಿ ಫೌಂಡೇಶನ್ ಕೋರ್ಸ್ ಗಳನ್ನು ದೇಶದ ವಿವಿಧ ಭಾಗಗಳ ಅನುಭವಿ ಶಿಕ್ಷಕರ ನೆರವಿನೊಂದಿಗೆ ಪರಿಚಯಿಸುತ್ತಿದೆ.
ಪ್ರಸ್ತುತ 2021-22 ನೇ ಸಾಲಿನ ದಾಖಲಾತಿ ಆರಂಭ ವಾಗಿದ್ದು ಆರನೇ ತರಗತಿಯಿಂದ ದ್ವಿತೀಯ ಪಿಯುಸಿ ತರಗತಿಯವರೆಗೆ ದಾಖಲಾತಿ ಸಂಬಂಧಿಸಿದ ಮಾಹಿತಿಗಾಗಿ ಸುಣ್ಣಾರಿ ಎಕ್ಸಲೆಂಟ್ ಕಾಲೇಜ್ನ ಕಚೇರಿ ಅಥವಾ ಕುಂದೇಶ್ವರ ರಸ್ತೆಯ ಶಿಕ್ಷಪ್ರಭಾ ಅಕಾಡೆಮಿಯ ಕಚೇರಿಯ ದೂರವಾಣಿ ಸಂಖ್ಯೆ 9964291755, 9845925983, 8217527362 ನಂಬರ್ ನ್ನು ಸಂಪರ್ಕಿಸ ಬಹುದಾಗಿದೆ.