ಕುಂದಾಪುರ (ಮೇ, 30): ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರಕಾರ ಯಶಸ್ವಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ವಿಧಾನಸಭಾ ಕ್ಷೇತ್ರ ಇವರ ನೇತೃತ್ವದಲ್ಲಿ ಮೇ 30 ರಂದು ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲದ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ , ರಾಜ್ಯ ಓಬಿಸಿ ಕಾರ್ಯದರ್ಶಿ ವಿಠ್ಠಲ್ ಪೂಜಾರಿ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಅರುಣ್ ಬಾಣ, ಜಿಲ್ಲಾ ಓಬಿಸಿ ಉಪಾಧ್ಯಕ್ಷರಾದ ಸುಧೀರ್ ಕೆಎಸ್, ಓಬಿಸಿ ಕುಂದಾಪುರ ಮಂಡಲದ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಅಂಕದಕಟ್ಟೆ, ಹಾಗೂ ಪ್ರಮೋದ್ ಆಚಾರ್, ಕಾರ್ಯದರ್ಶಿ, ದಯಾನಂದ ಖಾರ್ವಿ, ಸಂತೋಷ್ ಮಾರ್ಕೊಡ್, ಸತೀಶ್ ಶೇರಿಗಾರ್ ಹಂಗಳೂರು, ಬಿಜೆಪಿಯ ಮುಖಂಡರಾದ ರಾಜೇಶ್ ಕಾವೇರಿ,ಸದಾನಂದ ಬಳ್ಕೂರು , ಸುನಿಲ್ ಶೆಟ್ಟಿ ಹೇರಿಕುದ್ರು, ಸುರೇಂದ್ರ ಸಂಗಮ್, ರತ್ನಾಕರ್ ಚರ್ಚ್ ರೋಡ್, ಪುರಸಭೆಯ ಸದಸ್ಯರಾದ ಸಂದೀಪ್ ಖಾರ್ವಿ ಹಾಗೂ ಶೇಖರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಸುಧೀರ್. ಕೆ. ಎಸ್. ಇವರು 64ನೇ ಬಾರಿಗೆ ರಕ್ತದಾನ ಮಾಡಿದರು.