ಕುಂದಾಪುರ (ಮೇ, 30): ಕರೋನಾ ಎರಡನೆಯ ಅಲೆಯಿಂದಾಗಿ ಮುಂಬರುವ ದಿನಗಳಲ್ಲಿ ತಾಲೂಕಿನ ಆಸ್ಪತ್ರೆಗಳಲ್ಲಿ ಎದುರಾಗಬಹುದಾದ ಚಿಕಿತ್ಸೆ ಹಾಗೂ ಹಾಸಿಗೆಗಳ ಅಭಾವದ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ “ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕುಂದಾಪುರ ಪ್ರಖಂಡ” ಇದರ ಕಾರ್ಯಕರ್ತರು ಕುಂದಾಪುರ ನಗರದ ಕಳೆದ ವರ್ಷ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಿದ ಹಳೆ ಆದರ್ಶ ಆಸ್ಪತ್ರೆಯನ್ನು ಮೇ 30 ರಂದು ಸ್ವಚ್ಛಗೊಳಸಿ ವೈದ್ಯಕೀಯ ಸೇವೆಗಾಗಿ ಸಜ್ಜುಗೊಳಿಸಿದರು. ಇವರಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು.