ಕೋಟೇಶ್ವರ (ಜೂ, 01): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ಸೇವಾಭಾರತಿ ಸಂಸ್ಥೆಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ, ಉಡುಪಿ ವತಿಯಿಂದ 50 ಸಾವಿರ ರೂ ದೇಣಿಗೆಯ ಚೆಕ್ ನ್ನು ಮೊಗವೀರ ಸಂಘಟನೆ (ರಿ) ಉಡುಪಿ ಇದರ ಕೋಟೇಶ್ವರ ಘಟಕದ ಮೂಲಕ ಸೇವಾಭಾರತಿ ಪ್ರಮುಖರಿಗೆ ಹಸ್ತಾಂತರಿಸಲಾಯಿತು.
ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಜಿಲ್ಲಾ ಮಾಜಿ ಅಧ್ಯಕ್ಷ ಸತೀಶ್ ಎಂ. ನಾಯ್ಕ್ ಚೆಕ್ ನ್ನು ರಾಷ್ಟ್ರೀಯ ಸೇವಾಭಾರತಿ ಪ್ರಮುಖರಾದ ಬಿ.ಎಂ. ಗುರುರಾಜ್ ರಾವ್, ರಾಘವೇಂದ್ರ ಭಟ್, ಸುಹಾಸ್ ಪೈ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರವೀಶ್ ಕೊರವಾಡಿ, ಉಪಾಧ್ಯಕ್ಷ ಶ್ರೀಧರ ಬಿ. ಎನ್, ಕೃಷ್ಣಮೂರ್ತಿ ಸಾಲಿಗ್ರಾಮ, ಗಣೇಶ್ ಮೊಗವೀರ ಕುಂಜೂತು, ನವೀನ ಕೊಟೇಶ್ವರ ಉಪಸ್ಥಿತರಿದ್ದರು.
ಕರೋನಾ ಲಾಕ್ಡೌನ್ ಪ್ರಾರಂಭದ ದಿನಗಳಿಂದರೂ ಸಹಾಯ ಹಸ್ತಚಾಚಿರುವ ನಾಡೋಜಾ ಜಿ. ಶಂಕರ್ ಇತ್ತೀಚೆಗೆ ತಮ್ಮ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಉಡುಪಿ, ದಕ್ಷಿಣ ಕನ್ನಡ ಹಾಗೂ ಸುತ್ತ ಮುತ್ತಲಿನ ಜಿಲ್ಲೆಯ ಕರೋನ ಸೋಂಕಿತರ ಚಿಕಿತ್ಸೆಗಾಗಿ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದಲ್ಲಿ ಆಕ್ಸಿಜನ್ ತಯಾರಿಕ ಘಟಕ ಸ್ಥಾಪನೆ ಹಾಗೂ 45 ಲಕ್ಷ ರೂಪಾಯಿಗಳ 60 ಆಕ್ಸಿಜನ್ ಕಾನ್ಸೆಂಟ್ರೇಟರುಗಳನ್ನು ಕರೋನ ಸೋಂಕಿತರ ಚಿಕಿತ್ಸೆಗೆ ಕೊಡುಗೆಯಾಗಿ ನೀಡಿದ್ದಾರೆ.