ಗಂಗೊಳ್ಳಿ (ಜೂ, 2): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿ ಸೇವಾ ನಿಮಿತ್ತ ಯಾದಗಿರಿಗೆ ವರ್ಗಾವಣೆಗೊಂಡಿರುವ ಡಾ|ಗಿರೀಶ್ ಕುಲಕರ್ಣಿ ಇವರಿಗೆ ಸೇವಾ ಭಾರತಿ ಗಂಗೊಳ್ಳಿ ಇದರ ಸ್ವಯಂಸೇವಕರು ಗೌರವ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿನ ಡಾ |ಗಿರೀಶ್ ಕುಲಕರ್ಣಿಯವರ ವೈದ್ಯಕೀಯ ಸೇವೆಗೆ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.











