ಇಂದು-ನಾಳೆ ಹೇಗೋ
ಹಾಗೆ ದಿನ, ವಾರ, ತಿಂಗಳುಗಳು
ವರ್ಷಗಳು ಉರುಳುತ್ತಿವೆ ಗೊತ್ತೇ ಆಗದೆ
ಬದುಕು ಸಹಜ ಅ ಸಹಜಗಳ ಇಂದು, ನಾಳೆಗಳ ಮಧ್ಯೆ
ಈಗ ಎಲ್ಲಾ ಭರವಸೆಗಳ ಮೇಲೆ ಕಟ್ಟಿದ ಬದುಕು
ಗಾಜಿನ ಮನೆಯಂತಾಗಿದೆ
ಕಾಯುತ್ತಿದ್ದೇವೆ ನಾವುಗಳು ಸರತಿಸಾಲಿನಲ್ಲಿ ಇಂದು, ನಾಳೆಯೂ ಮುಂದೆ ಏನೇನೊ ಎಂದು
ಮುಂದೆ ಹೋಗುವವರಿಗೆ ದಾರಿ ಮಾಡಿ ಕೊಡುತ್ತಾ ಕಂಡು ಕಾಣದ ಎಂದೂ ಮರೆಯದ ಈ ಹೆಮ್ಮಾರಿ ಕಾಯಿಲೆಗೆ ಶರಣಾಗಿ
ಕೆಲವರ ಜೀವ ಪಂಚ ಭೂತಗಳಲ್ಲಿ ಲೀನವಾಗಿದೆ
ಹೇಳದೆ ಕೇಳದೆ ಕನಸು ಮಾರಿ ಹೊರಟು ಬಿಟ್ಟಿದ್ದಾರೆ ಹೊಸ ಲೋಕ ಹುಡುಕಿ ಕನಸು ಕಟ್ಟಲು
ಬಡವರ ಜೀವನ ಸತ್ಯ ನಾಶವಾಯಿತು
ಒಬ್ಬರ ಮುಖ ಇನ್ನೊಬ್ಬರು ಕಾಣದೆ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ
ಕೊನೆಯೆಂದು ಈ ಕರಿನೆರಳಿಗೆ…?!


✍️ ಈಶ್ವರ ಸಿ, ನಾವುಂದ.










