ಕುಂದಾಪುರ (ಜೂ, 5): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೇ ಉಸಿರು (ಉಸಿರನಿತ್ತ ಪ್ರಕೃತಿಯನ್ನು ಹಸಿರಾಗಿಸೋಣ) ಎನ್ನುವ ಗಿಡ ನೆಡುವ ಅಭಿಯಾನಕ್ಕೆ ಜೂನ್ 5ರಂದು ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ.ಉಮೇಶ್ ಶೆಟ್ಟಿ ಹಾಗೂ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೊವಾಡಿಯವರ ಮಾರ್ಗದರ್ಶನದೊಂದಿಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ತಮ್ಮ ಮನೆಯ ಅಂಗಳದಲ್ಲಿ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಎನ್ಎಸ್ಎಸ್ ಸಹಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಎನ್ಎಸ್ಎಸ್ ವಿದ್ಯಾರ್ಥಿ ನಾಯಕರಾದ ರೋಷನ್ ಶೆಟ್ಟಿ (ದ್ವಿತೀಯ ಬಿಕಾಂ.ಬಿ ) ಹಾಗೂ ಸುಷ್ಮಾ ಶೆಟ್ಟಿ (ದ್ವಿತೀಯ ಬಿಕಾಂ.ಎ) ಕಾರ್ಯಕ್ರಮಕ್ಕೆ ಸಹಕರಿಸುವುದರ ಜೊತೆಗೆ ಗಿಡ ನೆಡುವ ಮೂಲಕ ಸಕ್ರಿಯವಾಗಿ ಭಾಗವಹಿಸಿದರು.
ಈ ಅಭಿಯಾನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ವರ್ಷದಾದ್ಯಂತ ಆಚರಿಸುವ ಯೋಜನೆಯನ್ನು ಕಾಲೇಜಿನ ಎನ್ಎಸ್ಎಸ್ ಘಟಕ ಯೋಜನೆ ರೂಪಿಸಿದ್ದು ಕಾಲೇಜಿನ ಎನ್ಎಸ್ಎಸ್ ಘಟಕದ ಎಲ್ಲಾ ಸ್ವಯಂಸೇವಕರು ಈ ಹಸಿರೇ ಉಸಿರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.