ಕುಂದಾಪುರ (ಜೂ, 12): ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಸತತ 46 ದಿನಗಳಿಂದ ಕುಂದಾಪುರ ಪರಿಸರದಲ್ಲಿನ ಸುಮಾರು 230 ಕ್ಕಿಂತಲೂ ಹೆಚ್ಚು ವೃದ್ದರಿಗೆ, ಕೂಲಿ ಕಾರ್ಮಿಕರಿಗೆ, ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವರಿಗೆ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಜೂನ್ 12 ರಂದು ನಡೆದ 46 ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ, ಶ್ರೀಧರ್ ಸುವರ್ಣ, ಮಾಜಿ ಕಾರ್ಯದರ್ಶಿ ಗೌತಮ್ ನಾವಡ ಇನ್ನಿತರರು ಉಪಸ್ಥಿತರಿದ್ದರು.