“ಸೋಲದಿರು ಎಂದೆಂದೂ”
ಓ ಮನಸೇ, ನೀ ವಿಶ್ವಬಂಧು
ಸಾಧನೆಯ ಪಣವ ಸ್ವೀಕರಿಸು ಇಂದು.
ಬಾನೇ ಬೀಳಲಿ, ಭುವಿಯೇ ಸೀಳಲಿ
ಸೋಲನ್ನು ಕಂಡು ಕುಸಿಯದಿರು ಎಂದು.
ಧೈರ್ಯವ ಬಿತ್ತಿ, ಸಹನೆಯ ಹೊತ್ತಿ
ಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.
ನೋವಿದ್ದರೆ ಇಂದು, ನಲಿವಿರುವುದು ಮುಂದು
ನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ.
ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ.
ಸಹಾಯಕ ಪ್ರಾಧ್ಯಾಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು ೫೬೦೦೨೯