ಉಪ್ಪುಂದ (ಜೂ, 17): ಕಳೆದ ಆರು ತಿಂಗಳುಗಳಿಂದ ಎರಡು ಕಿಡ್ನಿಗಳು ವೈಫಲ್ಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾವುಂದ ಬಡಾಕೆರೆ ಗ್ರಾಮದ 12 ವರ್ಷ ಪ್ರಾಯದ ಯುವಕ ಧನುಷ್ ಪೂಜಾರಿ ಯವರ ವೈದ್ಯಕೀಯ ಚಿಕಿತ್ಸೆಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್, ಉದ್ಯಮಿ ಹಾಗೂ ಕೊಡುಗೈದಾನಿಗಳಾದ ಶ್ರೀ ಗೋವಿಂದ ಬಾಬು ಪೂಜಾರಿ ಯವರು ತಮ್ಮ ಟ್ರಸ್ಟ್ ವತಿಯಿಂದ ಸಹಾಯಧನವನ್ನು ಯುವಕನ ಚಿಕ್ಕಪ್ಪ ಶ್ರೀಚಂದ್ರ ಪೂಜಾರಿಯವರಿಗೆ ಹಸ್ತಾಂತರಿಸಿದರು.