ಕಣ್ಣು ತೆರೆದಾಗ ನಾ ಕಂಡ ಶಿವ ನೀನು
ಮನೆಯಂಬ ಗುಡಿಯಲಿ ನೆಲಸಿರುವ ದೇವರು ನೀನು
ನಿನ್ನ ನಡೆಯೇ ವಿದ್ಯಾದಾಯಿನಿ
ನಿನ್ನ ನುಡಿಯೇ ದಿವ್ಯವಾಣಿ
ನೀನೇ ನನ್ನ ಬಾಳ ಅನುಗ್ರಹ
ನೀನೇ ನನ್ನ ಸರ್ವಸ್ವ ….ನನ್ನ ತಂದೆ.
ನೀನು ಕಣ್ತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನು
ನಮ್ಮ ಬದುಕು ರೂಪಿಸು ಹಗಲಿರುಳು ದುಡಿದವ ನೀನು
ನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆ
ನೀನೇ ನನ್ನ ಸರ್ವಸ್ವ ….ನನ್ನ ತಂದೆ.
ನಿನ್ನ ನಗುವೆ ನನಗೆ ಕೋಟಿ ಧನ
ನೀನಿರುವ ತಾಣವೇ ನನಗೆ ದೇವಸ್ಥಾನ
ನಿನ್ನ ಪ್ರೀತಿಗೆ ಚಿರಋಣಿಯು ನಾನು
ನಿನ್ನ ಆಶೀರ್ವಾದದ ಅನುಗ್ರಹಿಯು ನಾನು
ನೂರು ವರುಷ ಸುಖವಾಗಿ ಬಾಳು ನೀನು
ನೀನೇ ನನ್ನ ಸರ್ವಸ್ವ …..ನನ್ನ ತಂದೆ.
ಡಾ. ಉಮ್ಮೆ ಸಲ್ಮಾ ಎಂ.
ಸಹಾಯಕ ಪ್ರಾಧ್ಯಾಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು ೫೬೦೦೨೯