ಅಂಪಾರು (ಜೂ, 22): ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯಿಂದ ಅಂಪಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಜೂನ್,22 ರಂದು ಅಂಪಾರು ಗ್ರಾಮ ಪಂಚಾಯತ್ ಕೇಂದ್ರದಲ್ಲಿ ನಡೆಯಿತು.
ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯ ಶ್ರೀ ನಿತೇಶ್ ಮಲ್ಪೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಅಂಪಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, VRW ಸುಜಾತ ಶೆಟ್ಟಿ, ಹಾಗೂ ಪ್ರತಿನಿಧಿ ಆಕಾಶ್ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.