ಉಪ್ಪುಂದ (ಜೂ, 26): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಹಸ್ರಾರು ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಿರುವ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಜೂನ್ ,26 ರಂದು ತಮ್ಮ 44 ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಉಪ್ಪುಂದದ ಕಾಸನಾಡಿ ಗ್ರಾಮದ ವಿಜಯ ರಮೇಶ್ ಪೂಜಾರಿಯವರಿಗೆ ನೂತನ ಮನೆ ಶ್ರೀ ವರಲಕ್ಷ್ಮಿ ನಿಲಯ ” ಗ್ರಹಪ್ರವೇಶ ನೆರವೇರಿಸಿ, ಮನೆಯ ಕೀ ಯನ್ನು ಹಸ್ತಾಂತರ ಮಾಡುವುದರ ಮೂಲಕ ತಮ್ಮ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಶ್ರೀ ಗೋವಿಂದ ಬಾಬು ಪೂಜಾರಿಯವರು ಉಪ್ಪುಂದ ಕಾಸನಡಿಯಲ್ಲಿ ವಿಜಯ ರಮೇಶ್ ಪೂಜಾರಿಯವರಿಗೆ ತಮ್ಮ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ). ಉಪ್ಪುಂದ ದ ವತಿಯಿಂದ ಈ ಮನೆಯನ್ನು ನಿರ್ಮಾಣ ಮಾಡಿ ಫಲಾನುಭವಿಗೆ ಹಸ್ತಾಂತರಿಸಿರುತ್ತಾರೆ.
ಈ ಸಂದರ್ಭದಲ್ಲಿ ಫಲಾನುಭವಿ ರಮೇಶ ವಿಜಯ ದಂಪತಿಗಳು ಹಾಗೂ ಶ್ರೀ ಗೋವಿಂದ ಬಾಬು ಪೂಜಾರಿಯ ಹಾಗೂ ಶ್ರೀಮತಿ ಮಾಲತಿ ಗೋವಿಂದ ಪೂಜಾರಿ ಹಾಗೂ ಕುಟುಂಬಸ್ಥರು ,ಗುರುರಾಜ್ ಪೂಜಾರಿ ಮತ್ತು ಅಭಿಮಾನಿ ಬಳಗ ಉಪಸ್ಥಿತರಿದ್ದರು. ಉಪ್ಪುಂದ ಕಾಸನಾಡಿ ವಿಜಯ ರಮೇಶ್ ಪೂಜಾರಿಯವರು ಬಡತನದ ನಡುವೆ ಆಶ್ರಯ ವಂಚಿತರಾಗಿದ್ದು, ಶ್ರೀ ಗೋವಿಂದ ಬಾಬು ಪೂಜಾರಿಯವರು ಅವರ ಈ ಕಷ್ಟ ಪರಿಸ್ಥಿತಿಗೆ ಸ್ಪಂದಿಸಿ ವಾಸಕ್ಕಾಗಿ ಮನೆ ನಿರ್ಮಾಣ ಮಾಡಿಕೊಟ್ಡಿದ್ದಾರೆ.
ಗ್ರಹ ಪ್ರವೇಶದ ನಂತರ ಮಾದ್ಯಮದವರ ಜೊತೆ ಮಾತನಾಡಿದ ಶ್ರೀ ಗೋವಿಂದ ಬಾಬು ಪೂಜಾರಿಯವರು ಇನ್ನೂ ಎರಡು ಕಡೆ ಮನೆಯ ನಿರ್ಮಾಣ ಹಂತದಲ್ಲಿದ್ದು, ಈ ವರ್ಷದಲ್ಲೇ ಅದರ ಗ್ರಹಪ್ರವೇಶ ಮತ್ತು ಕೀ ಹಸ್ತಾಂತರ ನೆಡೆಯಲಿದೆ ಎಂದು ಹೇಳಿದರು. ಪ್ರತಿ ವರ್ಷಕ್ಕೆ 2 ನಿರಾಶ್ರಿತ ಕುಟಂಬಗಳನ್ನು ಗುರುತಿಸಿ ನಮ್ಮ ಸಂಸ್ಥೆಯಿಂದ ಮನೆ ಕಟ್ಟಿಕೊಡುವ ಸಂಕಲ್ಪದ ಮಾಡಿದ್ದೇನೆ ಎಂದು ಶ್ರೀ ಗೋವಿಂದ ಬಾಬು ಪೂಜಾರಿಯವರು ಹೇಳಿದರು.
ವರದಿ ✍️ಈಶ್ವರ ಸಿ ನಾವುಂದ.