ಕುಂದಾಪುರ (ಜೂ, 28) : ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಇದರ 30ನೇ ಸೇವಾ ಯೋಜನೆಯ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಕೊರವಡಿ ಬಣಸಾಲೆ ಬೆಟ್ಟಿನ ನಿವಾಸಿಯಾದ ಶ್ರೀಮತಿ ಲಕ್ಷ್ಮೀ ಯವರಿಗೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚಕ್ಕೆ ಸಹಾಯ ಧನ ಹಾಗೂ ಟ್ರಸ್ಟ್ ನ 31ನೇ ಯೋಜನೆಯ ಅಂಗವಾಗಿ ಅಕಸ್ಮಿಕ ಅಪಘಾತದಲ್ಲಿ ತಲೆಗೆ ಬಲವಾದ ಏಟು ಬಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ದೀಕ್ಷಿತ್ ಪೂಜಾರಿಯವರ ಹೆಚ್ಚಿನ ಚಿಕಿತ್ಸಾ ವೆಚ್ಚಕ್ಕೆ ಟ್ರಸ್ಟ್ ವತಿಯಿಂದ ಜೂನ್,28 ರಂದು ಕೋಟ ಹಾಡಿಕೆರೆ ಶಾಂತಮೂರ್ತಿ ಶನೇಶ್ವರ ದೇವಸ್ಥಾನಲ್ಲಿ ಧನಸಹಾಯದ ಚೆಕ್ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್( ರಿ) ಸಂಸ್ಥೆಯ ಗೌರವ ಅಧ್ಯಕ್ಷರಾದ
ಕೊಡುಗೈದಾನಿ ಹಾಗೂ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿ ಉಪಸ್ಥಿತರಿದ್ದು, ಸ್ಥಳದಲ್ಲೇ ಈ ಎರಡೂ ಕುಟುಂಬಕ್ಕೆ ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದಲೂ ಸಹ ಧನ ಸಹಾಯದ ಚೆಕ್ ಹಸ್ತಾಂತರಿಸುವುದರ ಮೂಲಕ ಚಿಕಿತ್ಸೆಗೆ ನೆರವು ನೀಡಿದರು. ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.