ಕುಂದಾಪುರ (ಜು, 02): ಶ್ರೀ ಮಾರಣಕಟ್ಟೆ ಮೇಳದ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿಯವರು ಮಾರಣ ಕಟ್ಟೆ ಸಮೀಪದ ಹಾರ್ಮಣ್ ಬಳಿ ಜೂನ್, 30ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಕಡು ಬಡತನದಲ್ಲಿರುವ ಸುಬ್ರಹ್ಮಣ್ಯ ಮೊಗವೀರ ರವರು ತಾಯಿ, ತಮ್ಮ ಹಾಗೂ ಅಜ್ಜಿಯೊಂದಿಗೆ ಸಣ್ಣ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಕಲಾವಿದ ಸುಬ್ರಹ್ಮಣ್ಯರವರ ಚಿಕಿತ್ಸಾ ವೆಚ್ಚ ಬರಿಸಲಾಗದೆ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಮಾನವೀಯ ನೆಲೆಯಲ್ಲಿ ಕಲಾವಿದನ ಚಿಕಿತ್ಸಾ ವೆಚ್ಚ ಬರಿಸಲು ಸಹಾಯ ಮಾಡಲಿಚ್ಚಿಸುವರು ಕೆಳಕಂಡ ಬ್ಯಾಂಕ್ ಖಾತೆಗೆ ಧನಸಹಾಯ ಮಾಡಬಹುದಾಗಿದೆ.
Account Number: 01532610000315
IFS Code: CBRB0010153
Canara Bank, Vandse Branch.
Phone number . 9972346022