ಕೋಟೇಶ್ವರ (ಜು, 2): ಕುಂದಾಪುರ ತಾಲೂಕಿನ ಪಡು ಗೋಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ,1ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಜೊತೆಗೆ ರಾಜ್ಯ ಸರಕಾರ ನಿಗದಿ ಪಡಿಸಿದ ಕರೋನದ ಮಾರ್ಗಸೂಚಿಯ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗೋಪಾಡಿ ಪಂಚಾಯಿತಿನ ಪ್ರಥಮ ಪ್ರಜೆ ಶ್ರೀಮತಿ ಸರೋಜಾ ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆಯನ್ನು
ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಶೆಟ್ಟಿ, ಸಹ ಶಿಕ್ಷಕಿ ಶ್ರೀಮತಿ ಮಾಲತಿ ನಾಯ್ಕ,ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್,ಪಂಚಾಯತ್ ಸದಸ್ಯ ಶ್ರೀ ಪ್ರಭಾಕರ್ (ಪ್ರಕಾಶ್) ಕಾಂಚನ್ ಗೋಪಾಡಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.