ಮಂಗಳೂರು (ಜು, 03) : ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಸುರುಳಿಕುಮೇರಿ ನಿವಾಸಿ, ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ಜಿ.ಎಸ್. ಶಿವಕುಮಾರ್ ಅವರು ಕಳೆದ ಜೂನ್, 25 ರಂದು ಪುತ್ತೂರಿನ ಸಂಪ್ಯ ಬಳಿ ಬೈಕ್ ಅಪಘಾತದಿಂದಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.
ಅವರ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಅವರ ಚಿಕಿತ್ಸೆಗೆ ಬಹುದೊಡ್ಡ ಮೊತ್ತದ ಅವಶ್ಯಕತೆಯಿದ್ದು. ದಿನಕ್ಕೆ 40-50 ಸಾವಿರ ರೂ ಬಿಲ್ನ್ನು ಆಸ್ಪತ್ರೆಗೆ ಪಾವತಿಸಬೇಕಾಗಿದೆ. ಆದ್ದರಿಂದ ಮಾನವೀಯ ನೆಲೆಯಲ್ಲಿ ಚಿಕಿತ್ಸಾ ವೆಚ್ಚಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಯ ಖಾತೆಗೆ ಗೂಗಲ್ ಪೇ ಮೂಲಕ ನೆರವು ನೀಡಲು ಮನವಿ ಮಾಡಿಕೊಂಡಿದ್ದಾರೆ.
ಗೂಗಲ್ ಪೇ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ – 8762408332. (ಶಿವಕುಮಾರ್ ಅವರ ಪುತ್ರ ಶಶಾಂಕ್ ಭಟ್ )
ಬ್ಯಾಂಕ್ ಖಾತೆ ವಿವರ:
ಭಾರತೀಯ ಸ್ಟೇಟ್ ಬ್ಯಾಂಕ್ – ಪುತ್ತೂರು
ಖಾತೆ ಸಂಖ್ಯೆ : 35996068171
ಐಎಫ್ಎಸ್ಸಿ : SBIN0004270