ಅದೆಷ್ಟೋ ರಾತ್ರಿ ನಿನ್ನ ನೆರಳ ಚಾದರ ಹೊದ್ದು ಮಲಗಿದ್ದೆ ನಾನು….
ಕನಸು ಮಾರಿಕೊಂಡು ನಿನ್ನ ಸವಿನೆನಪ ಮೆರವಣಿಗೆಯಲ್ಲಿ….
ಕಳೆದು ಹೋದ ಬಯಕೆಗಳ ಹುಡುಕಾಟದಲ್ಲಿ ಹುಟ್ಟಿದ ಭಾವನೆಗಳಿಗೆ ಲೆಕ್ಕವೇ ಇಲ್ಲ …
ಚಾದರದ ಮುಸುಕಿನೊಳಗಿನ ಗುದ್ದಾಟಗಳಿಗೆ ಅರ್ಥವೇ ಇಲ್ಲ ….
ಬರಿ ಹಸಿ, ಹಸಿ ನೆನಪುಗಳ ನೆಪದಲ್ಲೇ ಉಳಿದು
ಸಮಯ ಸಿಕ್ಕರೆ ಕನಸಲ್ಲೂ ಬಂದು ಬಿಡು
ನಿನ್ನ ಮರೆತು ಬಿಡುವ ಮೊದಲು…! ನೆನಪಲ್ಲೇ ಬೆಂದು ಸಾಕಾಗಿದೆ ನನಗೆ…!!!
✍️ಕಲ್ಪನೆ : ಈಶ್ವರ ಸಿ ನಾವುಂದ