ಉಡುಪಿ (ಜು,8) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಎಂಜಿನಿಯರಿಂಗ್ ವಿಭಾಗವು ಸಂಶೋಧನಾ ವಿಮರ್ಶೆ ಘಟಕದ ಸಹಯೋಗದೊಂದಿಗೆ “ಬ್ಲಾಕ್ ಚೈನ್ ತಂತ್ರಜ್ಞಾನದ ಕುರಿತು ಒಂದು ಸಂಶೋಧನಾ ದೃಷ್ಟಿಕೋನ” ಎಂಬ ವಿಷಯದ ಕುರಿತು ಆನ್ಲೈನ್ ಕಾರ್ಯಗಾರವನ್ನು ಜುಲೈ 7 ರಂದು ಆಯೋಜಿಸಲಾಗಿತ್ತು. ಟೆಕ್ವೆಡ್ ಲ್ಯಾಟ್, ಎ.ಎಸ್.ಕ್ಯೂ.ಆರ್ ಟೆಕ್ನಾಲಜಿ ಇದರ ಸಹ ಸಂಸ್ಥಾಪಕ ಶ್ರೀ ಆದಿತ್ಯ ಎಸ್ ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಶ್ರೀ ಆದಿತ್ಯ ಅವರು ಕ್ರಿಪ್ಟೋ ಕರೆನ್ಸಿ ತಂತ್ರಜ್ಞಾನ ಅಸ್ತಿತ್ವಕ್ಕೆ ಬರುವ ಮೊದಲು ಇದ್ದ ಸಮಸ್ಯೆಗಳನ್ನು ವಿವರಿಸುತ್ತಾ, ಬ್ಲಾಕ್ಚೈನ್ ತಂತ್ರಜ್ಞಾನದ ವಿಕಸನದ ಸಂಕ್ಷಿಪ್ತ ವಿವರಣೆ ನೀಡಿದರು. ಬ್ಲಾಕ್ಚೈನ್ ತಂತ್ರಜ್ಞಾನದಲ್ಲಿ ಹ್ಯಾಶಿಂಗ್ ಪರಿಕಲ್ಪನೆಯು ಅದರ ಬೆನ್ನಲುಬಾಗಿದ್ದು, ಬ್ಲಾಕ್ಚೈನ್ ನಲ್ಲಿ ಅಸ್ತಿತ್ವದಲ್ಲಿರುವ ವಿಧಾನಗಳನ್ನು ಹೇಗೆ ಬದಲಾಯಿಸಬಹುದು ಹಾಗೂ ಅದರ ಅಂಕಿ ಅಂಶಗಳ ಸಂಗ್ರಹಣೆ ಬಗ್ಗೆ ತಿಳಿಸಿದರು. ಅವರು ಕೆಲ ಸಂಶೋಧನಾ ಕ್ಷೇತ್ರಗಳ ಬಗ್ಗೆಯೂ ಸಹ ತಿಳಿಸಿದರು. ಈ ಕಾರ್ಯಗಾರದಲ್ಲಿ 80 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರುಕ್ಮಿಣಿ ಭಟ್ ಸ್ವಾಗತಿ, ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು