ಹೆಮ್ಮಾಡಿ (ಜು, 11): ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ನಿಗೆ ಶಾಶ್ವತವಾಗಿ ಮನೆಯೊಂದನ್ನು ನಿರ್ಮಿಸಿ ಕೊಡುವ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮ್ಮ ಸೇವಾ ವೇದಿಕೆ ಹೆಮ್ಮಾಡಿ ಇದರ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಜುಲೈ 11 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ಸಭಾಗ್ರಹದಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶ್ರೀ ಉದಯ ಕುಮಾರ್ ಹಟ್ಟಿಯಂಗಡಿಯವರನ್ನು ಅಧ್ಯಕ್ಷರಾಗಿ, ಚಂದ್ರ ಬಿ. ಕಂಡ್ಲೂರು ರವರನ್ನು
ಕಾರ್ಯದರ್ಶಿಯಾಗಿ ಹಾಗೂ ಕೋಶಾಧಿಕಾರಿಯಾಗಿ ಶ್ರೀ ಜಗದೀಶ್ ಮಾರ್ಕೋಡು ಇವರನ್ನು ಆಯ್ಕೆ ಮಾಡಲಾಯಿತು. ಮೂರು ತಿಂಗಳ ಅವಧಿಯಲ್ಲಿ ಮನೆ ನಿರ್ಮಿಸಿ ಫಲಾನುಭವಿಗಳಾದ ಸುಬ್ರಮಣ್ಯ ಮೊಗವೀರ ನ ಕುಟುಂಬಕ್ಕೆ ನೆ ಹಸ್ತಾಂತರ ಮಾಡಬೇಕೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು. “ಯಕ್ಷನಿನಾದ” ತಂಡದವರು ದಾನಿಗಳಿಂದ ಸಂಗ್ರಹಿಸಿದ ಸಹಾಯ ಧನವನ್ನು ಮನೆ ನಿರ್ಮಾಣಕ್ಕೆ ಅಮ್ಮಸೇವಾ ವೇದಿಕೆ ಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ, ಶ್ರೀ ಸದಾನಂದ ಬಳ್ಕೂರು ರವರು ಮನೆ ನಿರ್ಮಾಣದ ನಿಧಿಗೆ ಸಹಾಯ ಧನದ ಚೆಕ್ ನೀಡಿದರು. ಸ್ಥಳೀಯ ಮುಖಂಡರುಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
✍️ವರದಿ :ಈಶ್ವರ ಸಿ ನಾವುಂದ