ಮಗ್ಗಲು ಬದಲಿಸಲು ರಾತ್ರಿಗಳೆಷ್ಟು
ಘೋರ ರಾತ್ರಿಯಲ್ಲಿ ಬೆಳದಿಂಗಳ ಹುಡುಕುವ ಬಯಕೆ!
ಒಳಗೆ ಹೇಳಲಾಗದ ಚಡಪಡಿಕೆ
ಹೊರಗೆ ಘನ ಘೋರ ಮಳೆ
ನಿದ್ದೆ ಹತ್ತಿರ ಸುಳಿಯುತ್ತಿಲ್ಲ …
ಅದೇನೋ ಯಾತನೆ…..
ಕಠೋರ ವರ್ತನೆ ಹೇಳಬೇಕಾದುದು ಹೇಳಲಾಗುತ್ತಿಲ್ಲ
ಅನುಭವಿಸಬೇಕಾದುದು.. ಅನುಭವಿಸಲಾಗುತ್ತಿಲ್ಲ
ನನ್ನ ಬಣ್ಣ ಮಾಸಿದ ಬದುಕಿನ ಬಗ್ಗೆ ಏನಾದರೂ ಹೇಳಲೇ ಬೇಕಿತ್ತು
ಕಪ್ಪು ಮಸಿ ಹಚ್ಚಿದ ವಿಧಿ ಬರಹದ ಪರಿಯು ಹೇಳಬೇಕಿತ್ತು
ನಿದ್ದೆಗೂ ಹೊಟ್ಟೆಕಿಚ್ಚು …
ಯಾಕೆ ಗೊತ್ತಾ ನಿದ್ದೆ ಬಂದರೆ ನೀನು ಕನಸಲ್ಲಿ ಬಂದು ಬಿಡ್ತೆಯಾಲ್ಲಾ….!?
✍️ಈಶ್ವರ ಸಿ. ನಾವುಂದ, ಚಿಂತಕ,ಮತ್ತು ಬರಹಗಾರರು.