ಕುಂದಾಪುರ (ಜು, 21): ಕುಂದಾಪುರದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಆನಗಳ್ಳಿಯ ಶ್ರೀ ದತ್ತಾಶ್ರಮದಲ್ಲಿ ಜುಲೈ, 24 ರಂದು ಗುರು ಪೂರ್ಣಿಮೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ತುಳಸಿ ಅರ್ಚನೆ, ಮಹಾಮಂಗಳಾರತಿ ಹಾಗೂ ಸಂಜೆ ದತ್ತ ಹೋಮ, ಭಜನಾ ಕೀರ್ತನೆ, ಸಾಧು-ಸಂತರಿಗೆ ಕಾಣಿಕೆ ಸಮರ್ಪಣೆ , ವಸ್ತ್ರ ವಿತರಣೆ , ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಲಿದ್ದು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಬೇಕೆಂದು ಆನಗಳ್ಳಿ ಶ್ರೀ ದತ್ತಾಶ್ರಮದ ಆಡಳಿತ ಮಂಡಳಿ ತಿಳಿಸಿದೆ.